ಜಿಲ್ಲೆಯಲ್ಲಿ ಪ್ಲೇಟ್ ಲೆಟ್ ಬ್ಯಾಂಕ್ ನಿಂದ ಹೆಚ್ಚಿನ ಪ್ರಯೋಜನ; ಡಾ. ಎಂ. ವಿ ಮೂಡ್ಲುಗಿರಿ
- Ananthamurthy m Hegde
- Aug 9
- 1 min read

ಕುಮಟಾ: ಉತ್ತರಕನ್ನಡ ಜಿಲ್ಲೆಯಲ್ಲಿ ರಕ್ತನಿಧಿ ಕೇಂದ್ರದಲ್ಲಿ ಪ್ಲೇಟ್ ಲೆಟ್ ಬ್ಯಾಂಕ್ ಆರಂಭವಾಗಿರುವುದರಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗುವ ರೋಗಿಗಳಿಗೆ ವರವಾಗಲಿದೆ. ಹಾಗೂ ರಕ್ತ ಗಣಕಗಳ ಕೊರತೆಯಿಂದ ಬಳಲುವ ರೋಗಿಗಳನ್ನು ಚಿಕಿತ್ಸೆಗೆಂದು ಹೊರ ಜಿಲ್ಲೆಯ ಆಸ್ಪತ್ರೆಗಳಿಗೆ ಕರೆದೊಯ್ಯುವ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಿತ್ತಿವೆ. ಆದರೆ ಪ್ಲೇಟ್ ಲೆಟ್ ಬ್ಯಾಂಕ್ ಸೌಲಭ್ಯದಿಂದ ಇದು ಕಡಿಮೆಯಾಗಲಿದೆ. ಕಳೆದ ಕೆಲವು ತಿಂಗಳಿಂದ ನೂರಾರು ಜನರಿಗೆ ಈ ಸೌಲಭ್ಯ ದೊರೆಯುತ್ತಿದೆ ಎಂದು ಬ್ಲಡ್ ಬ್ಯಾಂಕ್ ಕಾರ್ಯದರ್ಶಿ ಡಾ ಎಂ ವಿ ಮೂಡ್ಲುಗಿರಿ ತಿಳಿಸಿದ್ದಾರೆ.
೨೦೨೨ ರಲ್ಲಿ ಮೊದಲು ಕುಮಟಾದಲ್ಲಿ ಫ್ಲೇಟ್ ಲೆಟ್ ಬ್ಯಾಂಕ್ ತೆರೆಯಲಾಯಿತು. ಇದರಿಂದಾಗಿ ಹೆಚ್ಚಿನ ಜನರಿಗೆ ಇದರ ಸೌಲಭ್ಯದ ಬಗ್ಗೆ ಅರಿವಿಗೆ ಬಂದಿರಲಿಲ್ಲ. ಇತ್ತೀಚಿಗೆ ಫ್ಲೇಟ್ ಲೇಟ್ ಗಳ ಬ್ಯಾಂಕ್ ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೆ ಕಡಿಮೆ ದರದಲ್ಲಿ ನೀಡಲಾಗುತ್ತಿದೆ ಎನ್ದು ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















Comments