ಕುಮಟಾ ಬಿಜೆಪಿ ಮಂಡಳದಿಂದ ತುರ್ತು ಪರಿಸ್ಥಿತಿಯ ಕರಾಳ ಇತಿಹಾಸಕ್ಕೆ 50 ವರ್ಷ ಕಾರ್ಯಕ್ರಮ
- Ananthamurthy m Hegde
- Jun 28
- 1 min read
ಕುಮಟಾ: ಬಿಜೆಪಿ ಪಕ್ಷದ ಕುಮಟಾ ಮಂಡಳದ ವತಿಯಿಂದ ಮಿರ್ಜಾನ್ ರಾಮ ಕ್ಷತ್ರಿಯ ಸಬಾಭವನದಲ್ಲಿ "ತುರ್ತು ಪರಿಸ್ಥಿತಿಯ ಕರಾಳ ಇತಿಹಾಸಕ್ಕೆ 50 ವರ್ಷ - ಭಾರತೀಯ ಪ್ರಜಾಪ್ರಭುತ್ವದ ಕರಾಳ ಅಧ್ಯಾಯ" ಕಾರ್ಯಕ್ರಮವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ವಕೀಲರಾದ ನಾಗರಾಜ ನಾಯಕ ಮಾತನಾಡಿ ಅಂಬೇಡ್ಕರ್ ಸಂವಿಧಾನದ ಮೂಲ ಆಶಯವನ್ನು ಮರೆತು ಸಂವಿಧಾನಕ್ಕೆ ಸೆಕ್ಯೂಲರ್ ಎಂಬ ಶಬ್ದ ಸೇರಿಸಿ ಸೆಕ್ಯೂಲರ್ ದೇಶ ಮಾಡಿದವರು ಇದೇ ಕಾಂಗ್ರೆಸ್ಸಿಗರು. ರಾಜ್ ನಾರಾಯಣ ವಿರುದ್ಧ ಇಂದಿರಾಗಾAಧಿ ಅಕ್ರಮವಾಗಿ ಚುನಾವಣೆ ಗೆದ್ದ ಬಗ್ಗೆ ಅಲಹಾಬಾದ್ ಹೈಕೋರ್ಟ್ ನ್ಯಾಯಾಮೂರ್ತಿ ಜಗಮೋಹನ್ ದಾಸ್ ಸಿಂಗ್ ರವರ ತೀರ್ಪಿನ ವಿರುದ್ಧ ಕಾಂಗ್ರೆಸ್ ಕರಾಳ ಘೋರ ಕೃತ್ಯವೇ 1975 ರ ಈ ತುರ್ತುಪರಿಸ್ಥಿತಿ ಎನ್ನುವ ಮೂಲಕ ತುರ್ತುಪರಿಸ್ಥಿತಿಯಿಂದ ಅಂದು ಉಂಟಾದ ತೊಂದರೆಗಳು ಮತ್ತು ಅದರಲ್ಲಿ ಇಂದಿರಾಗಾAಧಿ ಮತ್ತು ಅವರ ಸುತ್ತಮುತ್ತಲಿರುವವರು ಒಟ್ಟಾರೆ ಕಾಂಗ್ರೆಸ್ಸಿಗರು ವಿರೋಧ ಪಕ್ಷ ಮತ್ತು ಸ್ವಪಕ್ಷದ ಕೆಲವು ಒಳ್ಳೆಯ ವ್ಯಕ್ತಿಗಳಿಗೆ ಉಂಟುಮಾಡಿದ ತೊಂದರೆಗಳ ಬಗ್ಗೆ ವಿವರಿಸಿದರು.
ಮಂಡಲಾಧ್ಯಕ್ಷ ಜಿ.ಐ ಹೆಗಡೆ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು ನಂತರ ಶಾಸಕ ದಿನಕರ ಶೆಟ್ಟಿ ರವರು 1975 ರ ತುರ್ತುಪರಿಸ್ಥಿತಿಯ ಕರಾಳ ದಿನದ ನೆನಪುಗಳ ಬಗ್ಗೆ ವಿವರಿಸಿದರು. ಅಂದು ಇಂದಿರಾಗಾAಧಿ ಅಮಾಯಕರನ್ನು ಬಂಧಿಸಿ ಜೈಲಿಗೆ ಕಳುಹಿಸುವ ಮೂಲಕ ಅಧಿಕಾರ ಅನುಭವಿಸಬಯಸಿದರೆ ಇಂದು ನಮ್ಮ ಹೆಮ್ಮೆಯ ಪ್ರಧಾನಿ ಶ್ರೀಮಾನ್ ನರೇಂದ್ರ ಮೋದಿಜಿ ರವರು ದೇಶ ಹಿಂದೆAದೂ ಕಾಣದ ಅಭಿವೃದ್ಧಿಯ ಪರ್ವವನ್ನೆ ನಡೆಸಿದ್ದಾರೆ ಎಂದರು. ಸುಬ್ರಾಯ ವಾಳ್ಕೆ ರವರು ಮಾತನಾಡಿ 1975 ರ ಜೂನ್ 24 ರಂದು ಇಂದಿರಾಗಾAಧಿ ಹೇರಿದ ತುರ್ತುಪರಿಸ್ಥಿತಿ ಸ್ವ ಹಿತಾಸಕ್ತಿಯಿಂದ ತನ್ನ ಕುಟುಂಬದ ಕೈಯಿಂದ ಅಧಿಕಾರ ತಪ್ಪದಂತೆ ಹೇರಿದ ಕರಾಳದಿನ ಎಂದು ವ್ಯಾಖ್ಯಾನಿಸಿದರು.
ಈ ವೇಳೆಗೆ ಶಾಸಕರಾದ ದಿನಕರ ಶೆಟ್ಟಿ, ಬಿಜೆಪಿ ಮುಖಂಡರಾದ ಸುಬ್ರಾಯ ವಾಳ್ಕೆ ಜಿಲ್ಲಾ ಉಪಾಧ್ಯಕ್ಷರು, ಜಿ.ಎಸ್.ಗುನಗಾ, ರಾಜ್ಯ ಶಿಕ್ಷಣ ಪ್ರಕೋಷ್ಠದ ಸಹ ಸಂಚಾಲಕರಾದ ಎಂ.ಜಿ.ಭಟ್, ನಿಕಟಪೂರ್ವ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಶ್ರೀಧರ ಗೌಡ, ಪಕ್ಷದ ಪದಾಧಿಕಾರಿಗಳು, ಪ್ರಮುಖರು, ಅಭಿಮಾನಿಗಳು ಜನಪ್ರತಿನಿದಿನಗಳು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
Comments