ಕೇಶವ ಹೆಗಡೆ ಕೊಳಗಿ ಮನೆ ಸಾಧಕರ ಮನೆಗೆ ಸಾಹಿತ್ಯ ಪರಿಷತ್ತು
- Ananthamurthy m Hegde
- Nov 8, 2024
- 1 min read
ಸಿದ್ದಾಪುರ: ಸಾಧಕರ ಮನೆಗೆ ಸಾಹಿತ್ಯ ಪರಿಷತ್ತು ಕಾರ್ಯಕ್ರಮದ ಅಡಿಯಲ್ಲಿ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಭಾಗವತ ಸಿದ್ದಾಪುರ ತಾಲೂಕಿನ ಕೇಶವ ಹೆಗಡೆ ಕೊಳಗಿಯವರ ಮನೆಗೆ ಸಿದ್ದಾಪುರ ತಾಲೂಕ ಸಾಹಿತ್ಯ ಪರಿಷತ್ ಘಟಕದವರು ತೆರಳಿ ಫಲತಾಂಬೂಲ ನೀಡಿ ದಂಪತಿಯನ್ನು ಅಭಿನಂದಿಸಿದರು.
ಈ ವೇಳೆ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ, ಕಸಾಪ ಮಾಜಿ ಅಧ್ಯಕ್ಷ ಪ್ರಾಂಶುಪಾಲ ಎಮ್. ಕೆ. ನಾಯ್ಕ ಹೊಸಳ್ಳಿ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ, ಸಾಹಿತಿ ಜಿ.ಜಿ ಹೆಗಡೆ, ಉಪನ್ಯಾಸಕ ರತ್ನಾಕರ ನಾಯ್ಕ ಮತ್ತಿತರರು ಮಾತನಾಡಿ ಕನ್ನಡ ಭಾಷೆಯ ಉಳಿವಿಗೆ ಯಕ್ಷಗಾನ ಕಲಾವಿದರ ಕೊಡುಗೆ, ಕೊಳಗಿ ಅವರ ಬಾಲ್ಯದ ನೆನಪು, ಕಲೆಗಾಗಿ ಪಟ್ಟ ಶ್ರಮ ಹಲವು ವಿಷಯದ ಕುರಿತು ಅನಿಸಿಕೆ ಹಂಚಿಕೊAಡರು.
ಈ ಸಂದರ್ಭದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಪಿ.ಬಿ ಹೊಸೂರು, ಕಾರ್ಯದರ್ಶಿ ಅಣ್ಣಪ್ಪ ನಾಯ್ಕ ಶಿರಳಗಿ , ಪ್ರಶಾಂತ ಶೇಟ್ ಹಾಳದಕಟ್ಟ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎನ್.ಗೌಡರ, ಸಾಹಿತ್ಯ ಪರಿಷತ್ತಿನ ಸದಸ್ಯ ಚಂದ್ರಶೇಖರ ಕುಂಬ್ರಿಗದ್ದೆ, ಪ್ರಶಾಂತ ಹೆಗಡೆ ಕಾಶಿಗದ್ದೆ, ರತ್ನಾಕರ ಪಾಲೇಕರ ಸುಧಾರಾಣಿ ನಾಯ್ಕ, ಸುಜಾತ ಹೆಗಡೆ ದಂಟಕಲ್, ಧನ್ಯಾ ಪಾಲಕರ ಉಪಸ್ಥಿತರಿದ್ದು ಶುಭ ಕೋರಿದರು.
Comentarios