ಕೃಷಿ ಯಂತ್ರೋಪಕರಣಗಳ ಬಾಡಿಗೆಗೆ ಹೊಸ ಯೋಜನೆ
- Ananthamurthy m Hegde
- Jun 27
- 1 min read

ಮೈಸೂರು: ಜಿಲ್ಲೆಯ ರೈತರಿಗೆ 2025-26ನೇ ಸಾಲಿನಲ್ಲಿ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ಆಧಾರದಲ್ಲಿ ಒದಗಿಸಲು ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ ಹೊಸ ಅವಕಾಶವನ್ನು ಘೋಷಿಸಲಾಗಿದೆ. ಈ ಯೋಜನೆಯಡಿ ವೈಯಕ್ತಿಕ ಫಲಾನುಭವಿಗಳು, ಕೃಷಿ ಯಂತ್ರಧಾರೆ ಕೇಂದ್ರಗಳು , ಸೇವಾದಾರ ಸಂಸ್ಥೆಗಳು, ಕೃಷಿ ಯಂತ್ರೋಪಕರಣ ಬ್ಯಾಂಕ್‌ಗಳು ಮತ್ತು ನೋಂದಾಯಿತ ಸಂಘ-ಸಂಸ್ಥೆಗಳು ಹೈಟೆಕ್ ಹಾರ್ವೆಸ್ಟರ್ ಹಬ್ ಸ್ಥಾಪಿಸಲು ಅರ್ಹರಾಗಿದ್ದಾರೆ.
ಈ ಯೋಜನೆಯಡಿ ಕಂಬೈನ್ಡ್ ಹಾರ್ವೆಸ್ಟರ್ ಮತ್ತು ಟ್ರಾಕ್ಟರ್ ಚಾಲಿತ ಬೇಲರ್ ಕಡ್ಡಾಯವಾಗಿದ್ದು, ಇತರ ಕೃಷಿ ಯಂತ್ರೋಪಕರಣಗಳನ್ನು ಸಹ ಹಬ್‌ನಲ್ಲಿ ಸೇರಿಸಬಹುದು. ಸಹಾಯಧನವನ್ನು "Credited Linked Back Ended Subsidy" ವಿಧಾನದ ಮೂಲಕ ಪಾವತಿಸಲಾಗುವುದು.















Comments