ಕಡತೋಕಾದಲ್ಲಿ ಯಕ್ಷರಂಗೋತ್ಸವ ಉದ್ಘಾಟಿಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯಕ್ಷಗಾನದಿಂದ ಸಂಸ್ಕಾರಯುತ ಜೀವನ ನಿರ್ಮಾಣ ಸಾಧ್ಯ
- Ananthamurthy m Hegde
- Nov 24, 2024
- 1 min read
ಹೊನ್ನಾವರ: ಈ ನೆಲದ ಶ್ರೀಮಂತಿಕೆಯನ್ನು ಬೆಳೆಸುವಲ್ಲಿ ಯಕ್ಷಗಾನದ ಕೊಡುಗೆ ಸಾಕಷ್ಟಿದೆ. ಯಕ್ಷಗಾನದ ಕೊಡುಗೆಯ ಕಾರಣಕ್ಕೆ ನಮ್ಮ ಜನಸಮುದಾಯದಲ್ಲಿ ಸುಸಂಸ್ಕೃತಿ, ಸಂಸ್ಕಾರಯುತ ಜೀವನ ನಿರ್ಮಾಣವಾಗಿದೆ. ಈ ಕಾರಣಕ್ಕೆ ಜಿಲ್ಲೆಯ ಜನರಿಗೆ ಹೆಚ್ಚು ಗೌರವವಿದೆ ಎಂದು ಉತ್ತರ ಕನ್ನಡ ಜಿಲ್ಲಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಹೊನ್ನಾವರ ತಾಲೂಕಿನ ಕಡತೋಕಾದಲ್ಲಿ ಶನಿವಾರ ನಡೆದ ಯಕ್ಷರಂಗೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿದ್ದ ಅನಂತಮೂರ್ತಿ ಹೆಗಡೆ ಮಾತನಾಡಿ, ಉತ್ತರ ಕನ್ನಡದ ಯಕ್ಷಗಾನದ ಮೇರು ಕಲಾವಿದರಾಗಿದ್ದ ಪದ್ಮಶ್ರೀ ಚಿಟ್ಟಾಣಿಯವರ ಹೆಸರನ್ನು ಹೊನ್ನಾವರದ ಯಾವುದಾದರೂ ಸರ್ಕಲ್ ಗೆ ಇಡುವ ಮೂಲಕಅವರ ಕೊಡುಗೆಯನ್ನು ನಾವು ಸ್ಮರಿಸಿಬೇಕಿದೆ. ಯಕ್ಷಗಾನವನ್ನು ಉಳಿಸಿ, ಬೆಳೆಸುವ ಕೆಲಸ ಎಲ್ಲರಿಂದ ಆಗಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ದಿನಕರ ಶೆಟ್ಟಿ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಸಂಘಟಕರಾದ ಶಿವಾನಂದ ಹೆಗಡೆ ಕಡತೋಕಾ ಸೇರಿದಂತೆ ಇನ್ನಿತರ ಗಣ್ಯರು ಇದ್ದರು.
Recent Posts
See Allಹೊನ್ನಾವರ: ಇಲ್ಲಿನ ಹಡಿನಬಾಳದ ಶ್ರೀ ಸಿದ್ಧಿ ವಿನಾಯಕ ಯಕ್ಷಗಾನ ಕಲಾ ಕೇಂದ್ರ ಕಪ್ಪೆ ಕೆರೆ ವತಿಯಿಂದ ದಿ. ಮಹಾದೇವ ಹೆಗಡೆ ಸಂಸ್ಮರಣೆ ಕಾರ್ಯಕ್ರಮ ಫೆ.೪ ರಂದು ನಡೆಯಲಿದೆ...
Comments