top of page

ಇಂದು ಬ್ರಹ್ಮ ಕಪಾಲ , ಕಂಸ ವಧೆ ಯಕ್ಷಗಾನ

  • Writer: Ananthamurthy m Hegde
    Ananthamurthy m Hegde
  • Feb 4
  • 1 min read

ಹೊನ್ನಾವರ: ಇಲ್ಲಿನ ಹಡಿನಬಾಳದ ಶ್ರೀ ಸಿದ್ಧಿ ವಿನಾಯಕ ಯಕ್ಷಗಾನ ಕಲಾ ಕೇಂದ್ರ ಕಪ್ಪೆ ಕೆರೆ ವತಿಯಿಂದ ದಿ. ಮಹಾದೇವ ಹೆಗಡೆ ಸಂಸ್ಮರಣೆ ಕಾರ್ಯಕ್ರಮ ಫೆ.೪ ರಂದು ನಡೆಯಲಿದೆ . ಕಾರ್ಯಕ್ರಮದಲ್ಲಿ ನುಡಿನಮನ, ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ಪ್ರದರ್ಶನ ನಡೆಯಲಿದೆ . ಸಂಜೆ ೪ .೩ ೦ ರಿಂದ ಗೋಪಿ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಆರಂಭವಾಗಲಿದ್ದು ಬ್ರಹ್ಮ ಕಪಾಲ , ಕಂಸ ವಧೆ ಎಂಬ ಎರಡು ಪ್ರಸಿದ್ಧ ಯಕ್ಷಗಾನ ಪ್ರದರ್ಶನಗಳು ನಡೆಯಲಿವೆ . ಯಕ್ಷಗಾನ ಹಿಮ್ಮೇಳದಲ್ಲಿ ಭಾಗವತರಾಗಿ ಸುಬ್ರಾಯ ಭಾಗವತ, ಕಪ್ಪೆಕೆರೆ, ಸರ್ವೇಶ್ವರ ಮೂರೂರು, ಫಣೀಂದ್ರ ಹೆಗಡೆ ಕಪ್ಪೆಕೆರೆ ಮೃದಂಗದಲ್ಲಿ ಮಂಜುನಾಥ ಹೆಗಡೆ ಕಂಚಿಮನೆ, ಪಿ.ಕೆ.ಹೆಗಡೆ ಹರಿಕೇರಿ ಚಂಡೆಯಲ್ಲಿ

ಗಜಾನನ ಹೆಗಡೆ ಸಾಂತೂರು, ಮಯೂರ ಸಾಥ್ ನೀಡಲಿದ್ದಾರೆ .

ಕಂಸವಧೆಯ ಕಂಸನಾಗಿ ಗೋಡೆ ನಾರಾಯಣ ಹೆಗಡೆ, ಅಕ್ರೂರನಾಗಿ ನಾರಾಯಣ ಭಟ್ಟ ಗುಂಡಿಬೈಲ್ , ಕೃಷ್ಣನಾಗಿ ದರ್ಶನ ಭಟ್ಟ ಮುಗ್ಗ , ಬಲರಾಮನಾಗಿ ವೆಂಕಟೇಶ ಹೆಗಡೆ ಬುಗರಿಮಕ್ಕಿ ಪಾತ್ರ ನಿರ್ವಹಿಸಲಿದ್ದಾರೆ .

ಬ್ರಹ್ಮ ಕಪಾಲದಲ್ಲಿ ಈಶ್ವರನಾಗಿ ಕೊಂಡದಕುಳಿ ರಾಮಚಂದ್ರ ಹೆಗಡೆ , ಬ್ರಹ್ಮನಾಗಿ ತೋಟಿಮನೆ ಗಣಪತಿ ಹೆಗಡೆ

ಶಾರದೆಯಾಗಿ ಅಶ್ವಿನಿ ಕೊಂಡದಕುಳಿ , ಮಹೋಗ್ರನಾಗಿ ಹಂಸಳ್ಳಿ ಈಶ್ವರ , ಕುಮುದೆಯಾಗಿ ರಮಾಕಾಂತ ಮೂರೂರು, ದೇವೇಂದ್ರನಾಗಿ ಕಟ್ಟೆ ಈಶ್ವರ ಭಟ್ಟ, ಯಕ್ಷಿಣಿಯಾಗಿ ನಿರ್ಮಲಾ ಗೋಳಿಕೊಪ್ಪ, ಮನ್ಮಥನಾಗಿ ಮಾರುತಿ ಬೈಲಗದ್ದೆ, ವಿಶ್ವಸೇನನಾಗಿ ನಾರಾಯಣ ಹೆಗಡೆ ಕೋರೆ, ವಿಷ್ಣುವಾಗಿ ಮಾರುತಿ ಬೈಲಗದ್ದೆ, ವ್ಯಾಫ್ರಾಸುರನಾಗಿ ಕೇಶವ ಗೌಡ ಹಡಿನಬಾಳ , ಕಿರಾತನಾಗಿ ನಾರಾಯಣ ಹೆಗಡೆ ಕೋರೆ ಪಾತ್ರ ನಿರ್ವಹಿಸಲಿದ್ದಾರೆ .

Comments


Top Stories

bottom of page