ಶರಾವತಿ ಸೇತುವೆ ಬಳಿ ಭೀಕರ ಅಪಘಾತ
- Ananthamurthy m Hegde
- Dec 31, 2024
- 1 min read
ಹೊನ್ನಾವರ: ಇಲ್ಲಿನ ರಾಷ್ಟೀಯ ಹೆದ್ದಾರಿ 66ರ ಶರಾವತಿ ಸೇತುವೆ ಬಳಿ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬೈಕ್ ಸವಾರ ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕಲ್ಲಿದ್ದ ಮಾವಿನಕುರ್ವಾದ ಸೋಮಯ್ಯ ಗೌಡ(34), ಸಂಸಿಯ ಗಿರೀಶ್ ಮಂಜುನಾಥ ನಾಯ್ಕ(22) ಖರ್ವಾದ ರಮೇಶ ಮಂಜುನಾಥ ನಾಯ್ಕ(22) ಮೃತ ದುರ್ದೈವಿಗಳು. ಬಿಜಾಪುರದಿಂದ ಮಂಗಳೂರಿಗೆ ತೆರಳುತ್ತಿದ್ದ ಸರ್ಕಾರಿ ಬಸ್ ಗೆ ಮುಂಜಾನೆ 4.30ರ ಸುಮಾರಿಗೆ ಅಪಘಾತ ಸಂಭವಿಸಿದ್ದು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments