top of page

ಕಡಲೆ ಹನುಮಂತ ದೇವಾಲಯದಲ್ಲಿ ವಾರ್ಷಿಕೋತ್ಸವ

  • Writer: Ananthamurthy m Hegde
    Ananthamurthy m Hegde
  • Dec 29, 2024
  • 1 min read

ಸಿದ್ದಾಪುರ ತಾಲೂಕಿನ ಡೊಂಬೆ ಕೈ ಕ್ರಾಸ್ ಬಳಿ ಇರುವ ಕಡಲೆ ಹನುಮಂತ ದೇವಾಲಯದಲ್ಲಿ ವಾರ್ಷಿಕೋತ್ಸವ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ಶುಕ್ರವಾರ ಹಾಗೂ ಶನಿವಾರದಂದು ವಿಜೃಂಭಣೆಯಿಂದ ನಡೆಯಿತು.

ಶುಕ್ರವಾರ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆರಂಭವಾದ ವಾರ್ಷಿಕೋತ್ಸವ ಕಾರ್ಯಕ್ರಮ ಶನಿವಾರ ಸತ್ಯನಾರಾಯಣ ವ್ರತ ಅನ್ನಸಂತರ್ಪಣೆಯೊಂದಿಗೆ ಸಂಪನ್ನಗೊಂಡಿತು. ಸಹಸ್ರಾರು ಭಕ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಹಣ್ಣುಕಾಯಿ ಸೇವೆ ಕುಂಕುಮಾರ್ಚನೆ ಮಂಗಳಾರತಿ ಹಾಗೂ ವಿವಿಧ ಸೇವೆಯನ್ನು ಸಲ್ಲಿಸಿದರು.

ಶನಿವಾರ ಮಧ್ಯಾಹ್ನ ಅನ್ನ ಸಂತರ್ಪಣೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು ಸಹಸ್ರ ಸಂಖ್ಯೆಯಲ್ಲಿ ಬಂದ ಭಕ್ತರು ದೇವರ ಪ್ರಸಾದ ಸ್ವೀಕರಿಸಿ ಪುನೀತರಾದರು.ವಾರ್ಷಿಕ ಕಾರ್ಯಕ್ರಮದ ನಿಮಿತ್ತ ಹನುಮಂತ ದೇವರಿಗೆ ಮಾಡಿದ ಅಲಂಕಾರ ಗಮನ ಸೆಳೆಯಿತು.ದೇವಾಲಯದ ಸುತ್ತಲೂ ವಿದ್ಯುತ್ ದೀಪಗಳಿಂದ ಸಿಂಗರಿಸಿರುವುದು ದೇವಾಲಯ ವಿಶೇಷವಾಗಿ ಕಂಗೊಳಿಸುತ್ತಿತ್ತು.

תגובות


Top Stories

bottom of page