top of page

ಕಣ್ಮನ ಸೆಳೆಯುತ್ತಿರುವ ಲ್ಯಾವೆಂಡರ್ ಹೂವು

  • Writer: Ananthamurthy m Hegde
    Ananthamurthy m Hegde
  • Jul 2
  • 1 min read
ree

ಮಡಿಕೇರಿ: ಕುಶಾಲನಗರದಲ್ಲಿರುವ ಬಹಳ ಪುರಾತನವಾದ ತಾವರೆಕೆರೆಯಲ್ಲಿ ವರ್ಷಪೂರ್ತಿ ಹೇರಳವಾಗಿ ಕಮಲದ ಹೂವುಗಳು ಬೆಳೆಯುತ್ತಿದ್ದವು, ಅದರಿಂದಾಗಿಯೇ ಈ ಕೆರೆಗೆ ತಾವರೆಕೆರೆ ಎಂಬ ಹೆಸರು ಹೆಸರು ಬಂದಿತ್ತು.

ಸುಮಧುರ ಕಮಲದ ಹೂವುಗಳಿಂದಲೇ ಅಲಂಕರಿಸಲ್ಪಟ್ಟಂತಿದ್ದ ಕೆರೆಯಲ್ಲಿ ಈಗ ಬಂಗಾಳದ ಭಯಂಕರ ಲ್ಯಾವೆಂಡರ್ ಹೂವು ಆವರಿಸಿಕೊಂಡಿದೆ. ಇದು ಪರಿಸರವಾದಿಗಳಲ್ಲಿ ಕಳವಳ ಹುಟ್ಟುಹಾಕಿದೆ. ಕುಶಾಲನಗರ-ಮಡಿಕೇರಿ NH275 ಮಾರ್ಗದಲ್ಲಿ ನೆಲೆಗೊಂಡಿರುವ ತಾವರೆಕೆರೆ ಕೆರೆಯು ಒಂದು ಕಾಲದಲ್ಲಿ ತನ್ನ ಶುದ್ಧ ನೀರು ಮತ್ತು ಕಮಲದ ಹೂವುಗಳಿಗೆ ಹೆಸರುವಾಸಿಯಾಗಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ, ಕೆರೆಗೆ ಹತ್ತಿರದ ವಾಣಿಜ್ಯ ಸಂಸ್ಥೆಗಳಿಂದ ಅತಿಕ್ರಮಣ ಮತ್ತು ಮಾಲಿನ್ಯದ ನೀರು ಸೇರುತ್ತಿರುವುದರಿಂದ , ಕಮಲದ ಹೂವು ನೋಡಲು ಸಿಗುವುದು ವಿರಳವಾಗಿದೆ.

ನೇರಳೆ ಬಣ್ಣದ ಈ ಹೂವುಗಳ ಅತಿರೇಕದ ಬೆಳವಣಿಗೆಯಿಂದಾಗಿ ಕೆರೆಯು ಈಗ ಲ್ಯಾವೆಂಡರ್ ಬಣ್ಣದಿಂದ ಆವೃತವಾಗಿದೆ. ಈ ಗಮನಾರ್ಹ ಬಣ್ಣದಿಂದಾಗಿ ಹೆದ್ದಾರಿಯಲ್ಲಿ ನಿಂತು ಅದರ ನೋಟವನ್ನು ಸೆರೆಹಿಡಿಯಲು ನೂರಾರು ಜನರು ಮುಂದಾಗುತ್ತಿದ್ದಾರೆ. ಪರಿಸ್ಥಿತಿಯನ್ನು ನಿರ್ವಹಿಸಲು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ನೋಟವು ಆಕರ್ಷಕವಾಗಿ ಕಂಡುಬಂದರೂ, ಪರಿಸರವಾದಿಗಳು ಸರೋವರದ ಸ್ಥಿತಿಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.

ಈ ನೇರಳೆ ಹೂವುಗಳು ಸರೋವರವನ್ನು ಆಕ್ರಮಿಸಿಕೊಂಡ ಕಾರಣ ಹೇರಳವಾಗಿ ಅರಳುತ್ತಿದ್ದ ಕಮಲದ ಗಿಡಗಳು ನಾಶವಾಗಿವೆ. ಸುತ್ತಮುತ್ತಲಿನ ಪ್ರದೇಶದ ವಾಣಿಜ್ಯ ಸ್ಥಳಗಳಿಂದ ಸರೋವರಕ್ಕೆ ಕಲುಷಿತ ನೀರಿನ ಹರಿವು ಹೆಚ್ಚಾಗಿರುವುದು ಈ ಹೊಸ ಬೆಳವಣಿಗೆಗೆ ಕಾರಣವಾಗಿದೆ. ಹೀಗಾಗಿ ಅಧಿಕಾರಿಗಳು ಸರೋವರವನ್ನು ರಕ್ಷಿಸಲು ತಕ್ಷಣವೇ ಕಾರ್ಯನಿರ್ವಹಿಸಬೇಕು ಎಂದು ಕಾವೇರಿ ಸ್ವಚ್ಛತಾ ಆಂದೋಲನದ ಸಂಚಾಲಕ ಚಂದ್ರಮೋಹನ್ ಒತ್ತಾಯಿಸಿದ್ದಾರೆ.

ಕಲುಷಿತ ನೀರಿನಲ್ಲಿ ಮಾತ್ರ ಈ ನೇರಳೆ ಹೂವುಗಳು ಬೆಳೆಯುವುದರಿಂದ ನೀರಿನ ಗುಣಮಟ್ಟ ಕ್ಷೀಣಿಸುತ್ತಿರುವುದರ ಸ್ಪಷ್ಟ ಸೂಚಕವಾಗಿದೆ ಎಂದು ಪರಿಸರವಾದಿಗಳು ಎಚ್ಚರಿಸಿದ್ದಾರೆ. ಇದಲ್ಲದೆ, ಅವುಗಳ ಉಪಸ್ಥಿತಿಯು ನೀರಿನಲ್ಲಿ ಆಮ್ಲಜನಕದ ಮಟ್ಟವನ್ನು ಕಡಿಮೆ ಮಾಡುತ್ತದೆ, ಇದು ಜಲಚರಗಳ ನಾಶಕ್ಕೆ ಕಾರಣವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಚಾಪೆಯಂತೆ ದಟ್ಟವಾಗಿ ನೇರಳೆ ಹೂವಿನ ಹೊದಿಕೆ ಹೊಂದಿರುವುದರಿಂದ ಸ್ಥಳೀಯ ಜಲಚರಗಳು ಬೇರೆಡೆಗೆ ಸ್ಥಳಾಂತರಿಸುತ್ತದೆ. ಸ್ಥಳೀಯ ಪರಿಸರ ವ್ಯವಸ್ಥೆಯನ್ನು ಅಡ್ಡಿಪಡಿಸುತ್ತದೆ. ಸಸ್ಯವು ಟ್ರಾನ್ಸ್ಪಿರೇಷನ್ ಮೂಲಕ ನೀರಿನ ನಷ್ಟವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಎಚ್ಚರಿಸುತ್ತಾರೆ, ಇದು ಕೆರೆಯ ಉಳಿವಿಗೆ ಮತ್ತಷ್ಟು ಅಪಾಯವನ್ನುಂಟುಮಾಡುತ್ತದೆ ಎಂದಿದ್ದಾರೆ.

ಕೆರೆಯ ಸಂರಕ್ಷಣೆಗಾಗಿ ಈಗಾಗಲೇ ಹಣವನ್ನು ಮಂಜೂರು ಮಾಡಲಾಗಿದ್ದರೂ, ಇಲ್ಲಿಯವರೆಗೆ ಯಾವುದೇ ಕಾರ್ಯವನ್ನು ಪ್ರಾರಂಭಿಸಲಾಗಿಲ್ಲ. ಈ ಸಮಸ್ಯೆಯ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಲಾಗಿದೆ, ಕೆರೆಯನ್ನು ಸಂರಕ್ಷಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು" ಎಂದು ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಹೇಳಿದ್ದಾರೆ.

Comments


Top Stories

bottom of page