top of page

ಕದ್ರಾ ಆಣೆಕಟ್ಟಿನ ಒಳಹರಿವಿನ ಪ್ರಮಾಣ ಏರಿಕೆ; ಜನರಿಗೆ ಮುನ್ನೆಚ್ಚರಿಕೆ

  • Writer: Ananthamurthy m Hegde
    Ananthamurthy m Hegde
  • Jul 4
  • 1 min read
ree

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿ ಯೋಜನೆ ಎರಡನೇ ಹಂತದ ಕದ್ರಾ ಆಣೆಕಟ್ಟಿನ ಜಲಾಯನ ಪ್ರದೇಶದಲ್ಲಿ ಮಳೆ ಪ್ರಮಾಣ ಹೆಚ್ಚಾಗುತ್ತಿದ್ದರಿಂದ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದ್ದು ನೀರನ್ನು ನದಿಗೆ ಬಿಡಲಾಗುತ್ತಿದೆ ಕದ್ರಾ ಜಲಾಶಯದ ಗರಿಷ್ಠ ಮಟ್ಟ 34.50ಮೀ ಗಳಾಗಿದು ಪ್ರಸಕ್ತ ಜಲಾಶಯದ ಮಟ್ಟ 30 ಮೀ ತಲುಪಿರುತ್ತದೆ ಜಲಾಶಯಕ್ಕೆ ಒಳಹರಿವಿನ ಪ್ರಮಾಣ 23. 182 ಕ್ಯೂ ಸೆಕ್ಸ್ ಇದೆ ಕಾರಣ ಕದ್ರಾ ಡ್ಯಾಮ್ ಕೆಳಭಾಗದಲ್ಲಿ ವಾಸಿಸುತ್ತಿರುವ ಜನತೆಗೆ ಜಲಾಶಯದ ಮಟ್ಟ ಏರಿಕೆ ಆದಾಗೆಲ್ಲ ಯಾವುದೇ ಸಮಯದಲ್ಲಿ ನೀರನ್ನು ಹೊರ ಬಿಡಲಾಗುವುದು ಎಂದು ಕೆಪಿಸಿಸಿ ಎಚ್ಚರಿಕೆ ನೀಡಿದೆ ಸುರಕ್ಷಿತ ದೃಷ್ಟಿಯಿಂದ ಆಣೆಕಟ್ಟಿನ ಕೆಳಭಾಗದಲ್ಲಿ ವಾಸಿಸುತ್ತಿರುವ ಜನ ಸುರಕ್ಷಿತ ಸ್ಥಳಕ್ಕೆ ತೆರಳಲು ಹಾಗೂ ಪ್ರಾಣಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸಾಗಿಸಲು ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಹಾಗೂ ದೋಣಿ ಸಂಚಾರ ಮೀನುಗಾರಿಕೆ ಮತ್ತು ಇತರೆ ಚಟುವಟಿಕೆಗಳನ್ನು ನಡೆಸಿದಂತೆ ಕದ್ರಾ ಡ್ಯಾಂ ಕಾರ್ಯನಿರ್ವಾಹಕ ಅಭಿಯಂತರು ತಿಳಿಸಿದ್ದಾರೆ

Comments


Top Stories

bottom of page