ರಸ್ತೆ ಒತ್ತುವರಿ ತೆರವು ಆಗ್ರಹಿಸಿ:ಜಿಲ್ಲಾಧಿಕಾರಿಗಳಿಗೆ ಮನವಿ
- Ananthamurthy m Hegde
- Jul 3
- 1 min read

ಕಾರವಾರ: ನಕಾಶೆಯಲ್ಲಿರುವ ಸಾರ್ವಜನಿಕ ರಸ್ತೆ ಮಾರ್ಗದ ಒತ್ತುವರಿ ತೆರವುಗೊಳಿಸುವಂತೆ ಶಿರಸಿ ತಾಲೂಕಿನ ಬನವಾಸಿ ಹೋಬಳಿ ವ್ಯಾಪ್ತಿಯ ಕುಪ್ಪಗದ್ದೆ ಮತ್ತು ವದ್ದಲ ಗ್ರಾಮಗಳ ಮಧ್ಯೆ ಭಾಗದ ನಿವಾಸಿಗಳು, ಅಕ್ಕಪಕ್ಕದ ರೈತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಈ ಹಿಂದೆ ಸಂಬಂಧಿಸಿದ ತಹಶೀಲ್ದಾರರಿಗೆ, ಸಹಾಯಕ ಆಯುಕ್ತರಿಗೆ ರಸ್ತೆ ಒತ್ತುವರಿ ತೆರವುಗೊಳಿಸಿಕೊಡುವಂತೆ ಮನವಿ ಸಲ್ಲಿಸಿದರೂ ಸಹ ಯಾವುದೇ ರೀತಿಯ ಪ್ರಯೋಜನವಾಗದೇ ಇರುವುದರಿಂದ ಇಂದು ಜಿಲ್ಲಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಾಮಚಂದ್ರ ಕಮ್ಮಾರ, ಗುತ್ತೆಪ್ಪ ಚೆನ್ನಯ್ಯ, ಪರಶುರಾಮ ಕಾಳಂಗಿ, ಬಸವರಾಜ ಕೆ, ಶಿಲ್ಪಾ ಕಮ್ಮಾರ, ಸರೋಜಾ ಕೆ, ಇನ್ನಿತರ ಸಾರ್ವಜನಿಕರು ಇದ್ದರು. ಮಳೆಗಾಲ ಪ್ರಾರಂಭವಾಗಿರುವುದರಿಂದ ರಸ್ತೆ ಮಾರ್ಗಕ್ಕೆ ಹೊಂದಿಕೊಂಡಿರುವ ಮನೆಗಳಿಗೆ, ಕೃಷಿ ಜಮೀನುಗಳಿಗೆ ವಹಿವಾಟು ಮಾಡಲು ಈ ನಕಾಶೆ ಕಂಡ ರಸ್ತೆ ಮಾರ್ಗ ಬಿಟ್ಟರೆ ಬೇರೆ ಯಾವುದೇ ಕಡೆಯಿಂದ ರಸ್ತೆ ಸಂಪರ್ಕ ಇರುವುದಿಲ್ಲ. ಹಾಗೂ ಅಕ್ಕಪಕ್ಕದ ಗ್ರಾಮಗಳ ಗ್ರಾಮಸ್ಥರಿಗೆ, ಸಾರ್ವಜನಿಕರಿಗೆ ಈ ರಸ್ತೆ ಸಂಪರ್ಕ ತುಂಬಾ ಅವಶ್ಯವಿದ್ದು ಶೀಘ್ರ ರಸ್ತೆ ಒತ್ತುವರಿ ತೆರವುಗೊಳಿಸಿಕೊಡುವಂತೆ ಮನವಿಯಲ್ಲಿ ಹೇಳಲಾಗಿದೆ.
Comments