ಕರ್ನಾಟಕ ನೈಸರ್ಗಿಕ ಸಂಪತ್ತಿನ ಶ್ರೀಮಂತ ನಾಡು
- Ananthamurthy m Hegde
- Nov 1, 2024
- 1 min read
ಶಿರಸಿ: ಕರ್ನಾಟಕ ರಾಜ್ಯವು ಸುಸಂಸ್ಕೃತ ಪರಂಪರೆಯನ್ನು ಹೊಂದಿದ ನೈಸರ್ಗಿಕ ಸಂಪತ್ತಿನ ಶ್ರೀಮಂತ ನಾಡಾಗಿದೆ. ಕನ್ನಡದ ಜನರು ಜಗತ್ತಿನಾದ್ಯಂತ ವಾಸಿಸುತ್ತಿರುವುದು ಕನ್ನಡ ನಾಡಿನ ಶಕ್ತಿಯನ್ನು ತೋರಿಸುತ್ತದೆ ಎಂದು ವಿಭಾಗೀಯ ಸಹಾಯಕ ಆಯುಕ್ತೆ ಕಾವ್ಯರಾಣಿ ಹೇಳಿದರು.
ಅವರು ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡಿಗರು ಕೇವಲ ಕನ್ನಡ ರಾಜ್ಯವಲ್ಲ ಇಡೀ ಜಗತ್ತಿನ ತಂತ್ರಜ್ಞಾನ ಮತ್ತು ವಿಜ್ಞಾನದ ಬೆಳವಣಿಗೆಯಲ್ಲಿ ಗುರುತರವಾದ ಕೊಡುಗೆ ನೀಡುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ತಹಸೀಲ್ದಾರ ಶ್ರೀಧರ ಮುಂದಲಮನಿ, ಪೌರಾಯುಕ್ತ ಕಾಂತರಾಜ, ಬಿ.ಇ.ಒ ನಾಗರಾಜ ನಾಯ್ಕ, ತಾ.ಪಂ ಕಾರ್ಯನಿರ್ವಹಣಾದಿಕಾರಿ ಸತೀಶ ಹೆಗಡೆ ಇತರರಿದ್ದರು.
Comments