ಕರ್ನಾಟಕದ ಜನ 2024ರಲ್ಲಿ ಹೆಚ್ಚು ಗೂಗಲ್ ಸರ್ಚ್ ಮಾಡಿದ್ದೇನು ?
- Ananthamurthy m Hegde
- Dec 31, 2024
- 1 min read

ಬೆಂಗಳೂರು: ಕರ್ನಾಟಕದ ಜನ 2024ರಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಿದ ಟಾಪ್ 10 ಸುದ್ದಿಗಳ ಪೈಕಿ ಒಂದು ಹಾಸನ ಮೂಲದ ರಾಜಕಾರಣಿ ಮತ್ತೊಬ್ಬರು ಖ್ಯಾತ ನಟ!
2024ರಲ್ಲಿ ಜನ ಗೂಗಲ್‌ನಲ್ಲಿ ಯಾವ ಅಂಶಗಳನ್ನು ಅತಿ ಹೆಚ್ಚು ಹುಡುಕಿದ್ದಾರೆ ಎಂಬ ಕುತೂಹಲ ಹಲವರಲ್ಲಿದೆ. ಈ ಬಗ್ಗೆ ಗೂಗಲ್ ಟ್ರೆಂಡ್ಸ್‌ನಲ್ಲಿ ಹುಡುಕಾಟ ನಡೆಸಿದಾಗ ಕರ್ನಾಟಕ ಜನ ನಟ ದರ್ಶನ್ ತೂಗುದೀಪ ಹಾಗೂ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕುರಿತು ಸುದ್ದಿಗಳನ್ನು ಅತಿ ಹೆಚ್ಚು ಹುಡುಕಿದ್ದಾರೆ ಎಂದು ತಿಳಿದುಬಂದಿದೆ.
2024ರಲ್ಲಿ ಕರ್ನಾಟಕ ರಾಜಕೀಯ, ಸಿನಿಮಾ, ಕ್ರೀಡೆ ಸೇರಿದಂತೆ ವಿವಿಧ ವಲಯಗಳಲ್ಲಿ ಹಲವು ಮಹತ್ವದ ಘಟನೆಗಳು ನಡೆದವು. ಆ ಪೈಕಿ ಭಾರೀ ಸದ್ದು ಮಾಡಿದ್ದು, ಮೇನಲ್ಲಿ ನಡೆದ ಹಾಸನ ಲೈಂಗಿಕ ದೌರ್ಜನ್ಯ ಹಗರಣ. ಅದರ ಪ್ರಮುಖ ಆರೋಪಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಆಗಿದ್ದರು. ಮತ್ತೊಂದು ಅಪರಾಧ ಘಟನೆ ಜೂನ್‌ನಲ್ಲಿ ನಡೆದ ರೇಣುಕಾಸ್ವಾಮಿ ಕೊಲೆ ಕೇಸ್ ಆಗಿದ್ದು, ಅದರ ಪ್ರಮುಖ ಆರೋಪಿ ನಟ ದರ್ಶನ್ ತೂಗುದೀಪ ಆಗಿದ್ದರು. ಹೀಗಾಗಿಯೇ, ಜನ ಹೆಚ್ಚಿನ ಪ್ರಮಾಣದಲ್ಲಿ ಈ ಇಬ್ಬರ ಬಗ್ಗೆ ಸುದ್ದಿ ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ.
ಹೆಚ್ಚು ಸರ್ಜ್ ಮಾಡಿ ಟಾಪ್ 10 ಸುದ್ದಿಗಳು:
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)
ಪ್ರಜ್ವಲ್ ರೇವಣ್ಣ.
ಒಲಂಪಿಕ್ಸ್ ಪ್ಯಾರಿಸ್
2024 ಟಾಪಿಕ್
2025 ಟಾಪಿಕ್
ಒಲಂಪಿಕ್ಸ್ ಗೇಮ್ಸ್
ಶ್ರೀರಾಮ ಜನ್ಮಭೂಮಿ ಮಂದಿರ್
ಲೋಕಸಭಾ
ಟಿಕೆಟ್ - ಅಡ್ಮಿಷನ್
ದರ್ಶನ್ ತೂಗುದೀಪ
ನಟ ದರ್ಶನ್ ಬಗ್ಗೆ ಏನೆಲ್ಲಾ ಹುಡುಕಾಟ?
ನಟ ದರ್ಶನ್ ಬೇಲ್
ದರ್ಶನ್ ಬೇಲ್
ದರ್ಶನ್ ಕೇಸ್
ದರ್ಶನ್ ಕೇಸ್ ಅಪ್ಡೇಟ್
ದರ್ಶನ್ ಕೇಸ್ ಡೀಟೈಲ್ಸ್
ರೇಣುಕಾಸ್ವಾಮಿ ಫೋಟೋಸ್
ಮರ್ಡರ್ ಆಫ್ ರೇಣುಕಾಸ್ವಾಮಿ
ದರ್ಶನ್ ಚಾರ್ಜ್‌ಶೀಟ್
ಕಾಟೇರಾ 2023 ಸಿನಿಮಾ
ಅರ್ಧ ವರ್ಷಕ್ಕಿಂತಲೂ ಹೆಚ್ಚು ಸುದ್ದಿಯಲ್ಲಿದ್ದ ದರ್ಶನ್:
ರೇಣುಕಾಸ್ವಾಮಿ ಕೊಲೆ ಜೂನ್ 8 ರಂದು ಜರುಗಿತು. ಜೂನ್ 11 ಕ್ಕೆ ಮೈಸೂರಿನಲ್ಲಿ ನಟ ದರ್ಶನ್ ಬಂಧನವಾಯ್ತು. ಆ ಬಳಿಕ ಆತನ ವಿಚಾರಣೆ, ನ್ಯಾಯಾಲಯಕ್ಕೆ ಹಾಜರು, ನ್ಯಾಯಾಂಗ ಬಂಧನ, ಬೆಂಗಳೂರು ಜೈಲಿಗೆ ಶಿಫ್ಟ್, ಬಳ್ಳಾರಿ ಜೈಲಿಗೆ ಶಿಫ್ಟ್ ಆ ಬಳಿಕ ಅನಾರೋಗ್ಯ ಕೊನೆಗೆ ಆರೋಗ್ಯ ಕಾರಣಕ್ಕೆ ಮಧ್ಯಂತರ ಜಾಮೀನು ಕೊನೆಗೆ ಡಿಸೆಂಬರ್‌ನಲ್ಲಿ ಸಾಮಾನ್ಯ ಜಾಮೀನು ಸಿಕ್ಕಿತು. ಸದ್ಯ ಸರ್ಕಾರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಲಿದೆ. ಹೀಗಾಗಿ, ದರ್ಶನ್ ಅರ್ಧ ವರ್ಷ ಸುದ್ದಿಯಲ್ಲಿದ್ದರು.















Comments