top of page

ಗೋಕರ್ಣದಲ್ಲಿ ಸಮುದ್ರಪಾಲಾದ ಇಬ್ಬರು ಪ್ರವಾಸಿಗರು

  • Writer: Ananthamurthy m Hegde
    Ananthamurthy m Hegde
  • Nov 29, 2024
  • 1 min read

ಕುಮಟಾ: ಬೆಂಗಳೂರಿನಿಂದ ಬಂದ ಪ್ರವಾಸಿಗರಿಬ್ಬರು ಉತ್ತರ ಕನ್ನಡ ಜಿಲ್ಲೆ ಗೋಕರ್ಣದಲ್ಲಿ ಸಮುದ್ರ ಪಾಲಾಗಿದ್ದಾರೆ. ಅವರನ್ನು ಬದುಕಿಸಿಕೊಳ್ಳುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ.

ಗುರುವಾರ ಸಂಜೆ ಬೆಂಗಳೂರಿನಿಂದ ೧೫ ಜನ ಸ್ನೇಹಿತರು ಗೋಕರ್ಣಕ್ಕೆ ಬಂದಿದ್ದರು. ಮಿಡ್ಲ್ ಕಡಲತೀರದಲ್ಲಿ ಅವರೆಲ್ಲರೂ ಮೋಜು ಮಸ್ತಿಯಲ್ಲಿ ತೊಡಗಿದ್ದರು. ಅಪಾಯದ ಮುನ್ಸೂಚನೆ ಅರಿಯದೇ ಬೆಂಗಳೂರಿನ ರವಿ (೩೦) ಹಾಗೂ ವಿಜಯನಗರದ ಪ್ರತೀಕ (೩೩) ಸಮುದ್ರದಲ್ಲಿ ಮುನ್ನುಗ್ಗಿದ್ದರು. ಇತರರು ಅವರನ್ನು ಹಿಂಬಾಲಿಸಿದ್ದು, ಅಲ್ಲಿದ್ದ ರಕ್ಷಣಾ ಸಿಬ್ಬಂದಿ ಇತರರನ್ನು ಸಮುದ್ರ ದಡೆಗೆ ಕರೆ ತಂದರು.

ಆದರೆ, ರವಿ ಹಾಗೂ ಪ್ರತೀಕ ಅಪಾಯದ ಸುಳಿಗೆ ಸಿಲುಕಿದ್ದು, ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಅವರಿಬ್ಬರನ್ನು ದಡಕ್ಕೆ ತಂದ ನಂತರವೂ ಬದುಕಬಹುದು ಎಂಬ ಹಿನ್ನಲೆ ತುರ್ತಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಸಾಕಷ್ಟು ಪ್ರಮಾಣದಲ್ಲಿ ಉಪ್ಪು ನೀರು ಕುಡಿದಿದ್ದ ಆ ಇಬ್ಬರೂ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Comments


Top Stories

bottom of page