ಗುಡ್ನಾಪುರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಂಭ್ರಮದ ಪ್ರಾರಂಭೋತ್ಸವ
- Ananthamurthy m Hegde
- Jun 1
- 1 min read

ಶಿರಸಿ ತಾಲೂಕು ಗುಡ್ನಾಪುರ ಸರ್ಕಾರಿ ಪ್ರೌಢ ಆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸುವ ಮೂಲಕ ಶಾಲಾ ಪ್ರಾರಂಭೋತ್ಸವ ಆಚರಿಸಿದರು.
ಬಳಿಕ ಮಾತನಾಡಿದ ಅವರು, ಸರ್ಕಾರಿ ಶಾಲೆಗಳು ಗುಮಣಟ್ಟದ ಶಿಕ್ಷಣ ನೀಡುತ್ತಿವೆ. ವಿದ್ಯಾರ್ಥಿಯ ಸಮಗ್ರ ಅಭಿವೃದ್ಧಿಗಾಗಿ ೪೬ ಅಂಶಗಳ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆ ಒದಗಿಸಿದೆ. ಪ್ರತಿ ಮಗುವಿನ ಪ್ರಗತಿಯೂ ಶಿಕ್ಷಣ ಇಲಾಖೆಗೆ ಪ್ರಮುಖ. ಸರ್ಕಾರಿ ಶಾಲೆಗೆ ಗುಣಮಟ್ಟದ ಶಿಕ್ಷಕರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ ಎಂದರು.
ಗುಡ್ನಾಪುರ ಗ್ರಾ ಪಂ ಸದಸ್ಯ ರಾಘು ನಾಯ್ಕ ಮಾತನಾಡಿ, ಶಾಲೆಯ ಪ್ರಗತಿಗೆ ಪಾಲಕರು ಮತ್ತು ಸ್ಥಳೀಯರ ಸಹಕಾರ ಅಗತ್ಯ ಎಂದರು. ಭೂ ನ್ಯಾಯ ಮಂಡಳಿ ಸದಸ್ಯ ರವಿ ನಾಯ್ಕ , ಶ್ರೀಕಾಂತ ಮಡಿವಾಳ ಇತರರಿದ್ದರು.















Comments