top of page

ಗೋರೆ ಗೋಪಾಲಕೃಷ್ಣ ದೇವಸ್ಥಾನದ ಕಲ್ಯಾಣಿ ಸ್ವಚ್ಚತಾ ಕಾರ್ಯ ನಡೆಸಿದ ಯುವ ಬ್ರಿಗೇಡ್

  • Writer: Ananthamurthy m Hegde
    Ananthamurthy m Hegde
  • Nov 25, 2024
  • 1 min read

ಯುವಾ ಬ್ರಿಗೇಡ್ ಕುಮಟಾ ಹಾಗೂ ಕೆನರಾ ಎಕ್ಸಲೆನ್ಸ್ ಪಿ.ಯು ಕಾಲೇಜ್ ಗೋರೆ ಸಹಯೋಗದಲ್ಲಿ ಸೋಮವಾರ ಬೆಳಿಗ್ಗೆ 200ಕ್ಕೂ ಅಧಿಕ ಯು ವಕರು ಮತ್ತು ಮಹಿಳೆಯರು ಸೇರಿ ಕುಮಟಾದ ಗೋರೆ ಗೋಪಾಲ ಕೃಷ್ಣ ದೇವಸ್ಥಾನದ ಕಲ್ಯಾಣಿ ಸ್ವಚ್ಛತೆ ಕಾರ್ಯ ಮಾಡಿದರು. ಸಂಜೆ ಭಾರತ ಮಾತೆಯ ಮೂರ್ತಿಯನ್ನು ದೋಣಿಯಲ್ಲಿ ಕುಳ್ಳಿಸಿ ದೀಪದ ಅಲಂಕಾರ ಮಾಡಿ ಕಲ್ಯಾಣಿಯ ಮಧ್ಯದಲ್ಲಿ ನಿಲ್ಲಿಸಿ ಆರತಿ ಮಾಡುವದರ ಮೂಲಕ ದೀಪೋತ್ಸವ ಕಾರ್ಯಕ್ರಮ ನೇರವೇರಿಸಿದರು.

ಯುವಾ ಬ್ರಿಗೇಡ್ ಕುಮಟಾದ ಸದಸ್ಯ ಸತೀಶ್ ಪಟಗಾರ ಮಾತನಾಡಿ ಅಭಿವೃದ್ಧಿಯ ನೆಪದಲ್ಲಿ ಇಂದು ಅದೆಷ್ಟೋ ಕೆರೆ ಕಟ್ಟೆಗಳು ಮುಚ್ಚಿ ಹೋಗಿದೆ. ದೇವಸ್ಥಾನಗಳಲ್ಲಿ ಅಥವಾ ಹಳ್ಳಿಗಳಲ್ಲಿ ಅಲ್ಲಲ್ಲಿ ಬೆರಳೆಣಿಕೆಯಷ್ಟು ಜಲಮೂಲಗಳು ಉಳಿದುಕೊಂಡಿವೆ. ಇರುವ ಜಲಮೂಲಗಳನ್ನು ಮುಂದಿನ ತಲೆಮಾರಿಗೆ ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ. ಆದರೇ ಮೋಜು ಮಸ್ತಿಗಾಗಿ ಪರಿಸರಕ್ಕೆ ಹಾನಿಯಾಗುವ ಪ್ಲಾಸ್ಟಿಕ್ ಬಾಟಲ್, ಪ್ಲಾಸ್ಟಿಕ್ ಕವರ್ ಇನ್ನಿತರೆ ಮಾಲಿನ್ಯಕಾರಕ ವಸ್ತುಗಳನ್ನು ನೀರಿನ ಮೂಲಕ್ಕೆ ಎಸೆಯುವುದರಿಂದ ಅದರ ಪಾವಿತ್ರತೆ ಕೆಡುವುದು ದಿನೇ ದಿನೇ ಹೆಚ್ಚಾಗುತ್ತಿದೆ. ಇಂದಿನ ಮಕ್ಕಳ ನಾಳಿನ ಪ್ರಜೆಗಳು ಕಾರಣ ಯುವಾ ಬ್ರಿಗೇಡ್ ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಕ್ಕಳನ್ನು ಮುಖ್ಯ ವಾಹಿನಿಯಲ್ಲಿ ಬಳಸಿಕೊಂಡು ಅವರಲ್ಲಿ ಸ್ವಚ್ಛತೆ ಬಗೆಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿ ಕುಮಟಾದ ಸ್ತ್ರೀರೋಗ ತಜ್ಞ ಹಾಗೂ ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಡಾ ಜಿ.ಜಿ ಹೆಗಡೆ ನಮಗೆ ನೆಲ ಜಲ ಹಾಗೂ ಜೀವನವನ್ನೇ ನೀಡಿದ ತಾಯಿ ಭಾರತ ಮಾತೆಗೆ ಕೃತಜ್ಞತೆ ಸಲ್ಲಿಸುವುದು ಪ್ರತಿ ಭಾರತೀಯನ ಕರ್ತವ್ಯ.. ಯುವಾ ಬ್ರಿಗೇಡ್ ಇಂತಹ ಒಂದು ಸುವರ್ಣ ಅವಕಾಶ ಮತ್ತು ಅದ್ಭುತ ಕಲ್ಪನೆ ಜನ ಮಾನಸದಲ್ಲಿ ಮೂಡಿಸುತ್ತಾ ಬಂದಿದ್ದು ನಿಜಕ್ಕೂ ಅಭಿನಂದನಾರ್ಹ ಸಂಗತಿ. ಇಂತಹ ಉತ್ತಮ ಕಾರ್ಯ ಸಮಾಜದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಗಲಿ ಎಂದರು.

ಈ ಸಂದರ್ಭದಲ್ಲಿ ಯುವಾ ಬ್ರಿಗೇಡ್ ವಿಭಾಗ ಸಹ ಸಂಚಾಲಕ ಅಣ್ಣಪ್ಪ ನಾಯಕ್ ಸಂಚಾಲಕ ಸಚೀನ್ ಭಂಡಾರಿ, ಸದಸ್ಯ ರವೀಶ ನಾಯ್ಕ , ಚಿದಂಬರ ಅಂಬಿಗ್, ಮದನ್ ಗುನಗ, ಸಂದೀಪ್ ಮಡಿವಾಳ, ಲಕ್ಷ್ಮೀಕಾಂತ ಮುಕ್ರಿ, ವಿನಾಯಕ ಗುನಗ, ಪ್ರಕಾಶ ನಾಯ್ಕ, ವಿಷ್ಣು ಪಟಗಾರ, ಗೌರೀಶ ನಾಯ್ಕ ಹಾಗೂ ಕಾಲೇಜಿನ ಬೋದಕ - ಬೋಧಕೇತರ ಸಿಬ್ಬಂದಿ, ಸ್ಥಳೀಯರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗಿಯಾಗಿದ್ದರು.

Comments


Top Stories

bottom of page