ಗಿಲ್ ಕೆಣಕಿದ ಅಬ್ರಾರ್ ಅಹ್ಮದ್ ಫುಲ್ ಟ್ರೊಲ್
- Ananthamurthy m Hegde
- Feb 24
- 1 min read
ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಭಾರತ ಮಣಿಸಿದ್ದು, ಆ ಮೂಲಕ ಟೂರ್ನಿಯಿಂದಲೇ ಪಾಕಿಸ್ತಾನ ತಂಡವನ್ನು ಬಹುತೇಕ ಹೊರದಬ್ಬಿದೆ.

ಇನ್ನು ನಿನ್ನೆ ಪಾಕಿಸ್ತಾನ ನೀಡಿದ್ದ 242 ರನ್ಗಳ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡದ ಬ್ಯಾಟರ್_ಗಳು ಪಾಕಿಸ್ತಾನ್ ತಂಡದ ಎಲ್ಲಾ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ್ದರು. ಆದರೆ ಯುವ ಸ್ಪಿನ್ನರ್ ಅಬ್ರಾರ್ ಅಹ್ಮದ್ ಮಾತ್ರ ಭಾರತೀಯ ಬ್ಯಾಟರ್ಗಳನ್ನು ಕಾಡಿದ್ದರು.
ಶುಭ್ಮನ್ ಗಿಲ್ ಅವರನ್ನು ಮಿಸ್ಟರಿ ಸ್ಪಿನ್ ಮೂಲಕ ಕ್ಲೀನ್ ಬೌಲ್ಡ್ ಮಾಡಿ ಎಲ್ಲರೂ ಅಚ್ಚರಿಪಡುವಂತೆ ಮಾಡಿದ್ದರು. ಅಂತಿಮವಾಗಿ ಅಬ್ರಾರ್ ಅಹ್ಮದ್ 10 ಓವರ್ಗಳಲ್ಲಿ ಕೇವಲ 28 ರನ್ ನೀಡಿ 1 ವಿಕೆಟ್ ಕಬಳಿಸಿದರು.
ಗಿಲ್ ಗೆ ವಿವಾದಾತ್ಮಕ ಸೆಂಡ್ ಆಫ್:
ಇನ್ನು ಶುಭ್ ಮನ್ ಗಿಲ್ ಔಟಾಗುತ್ತಿದ್ದಂತೆಯೇ ಅಬ್ರಾರ್ ವಿವಾದಾತ್ಮಕ ಸೆಂಡ್ ಆಫ್ ನೀಡಿದ್ದರು. ಗಿಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿ, ಪೆವಿಲಿಯನ್ಗೆ ನಡಿ ಎಂದು ಕಣ್ ಸನ್ನೆ ಮಾಡಿದ್ದರು. ಇಂತಹದೊಂದು ಬೀಳ್ಕೊಡುಗೆಯನ್ನು ನಿರೀಕ್ಷಿಸದಿದ್ದ ಗಿಲ್ ಗುರಾಯಿಸುತ್ತಲೇ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದ್ದರು.
ಪ್ರಿನ್ಸ್ ನ ಕೆಣಕಿ, ಕಿಂಗ್ ಇರೋದನ್ನೇ ಮರೆತ:
ಇನ್ನು ಅಬ್ರಾರ್ ರ ಈ ವರ್ತನೆಗೆ ಕೇವಲ ಭಾರತೀಯ ಅಭಿಮಾನಿಗಳು ಮಾತ್ರವಲ್ಲ.. ಪಾಕಿಸ್ತಾನದ ಅಭಿಮಾನಿಗಳೂ ಕೂಡ ಕೆಂಡಕಾರುತ್ತಿದ್ದಾರೆ. ಪ್ರಿನ್ಸ್ ನ ಕೆಣಕಿ ಕ್ರೀಸ್ ನಲ್ಲಿ ಕಿಂಗ್ ಇರೋದನ್ನೇ ಮರೆತ.. ಈತನಿಂದಲೇ ಫಾರ್ಮ್ ನಲ್ಲೇ ಇಲ್ಲದ ಕೊಹ್ಲಿ ರೊಚ್ಚಿಗೆದ್ದು ಶತಕ ಸಿಡಿಸಿ ಭಾರತ ತಂಡವನ್ನು ಗೆಲ್ಲಿಸಿದರು ಎನ್ನುವ ಅರ್ಥದಲ್ಲಿ ಟೀಕಾ ಪ್ರಹಾರ ನಡೆಸಿದ್ದಾರೆ. ಈ ಪಂದ್ಯದಲ್ಲಿ ಅಜೇಯ 101 ರನ್ ಗಳಿಸಿದ ಕೊಹ್ಲಿ ಇನ್ನೂ 7 ಓವರ್ ಬಾಕಿ ಇರುವಂತೆಯೇ ಭಾರತಕ್ಕೆ ಜಯ ತಂದಿತ್ತರು.
ಗಿಲ್ ಔಟ್ ಆದಾಗ ಅಭಿಮಾನಿಗಳು ಪಾಕ್ ಸ್ಪಿನ್ನರ್ ನನ್ನು ಕೇವಲ ಪೋಸ್ಟ್‌ಗಳ ಮೂಲಕ ಟ್ರೋಲ್ ಮಾಡುವುದಲ್ಲದೆ, ಮೀಮ್‌ಗಳನ್ನು ಸಹ ಬಿಡುಗಡೆ ಮಾಡುತ್ತಿದ್ದಾರೆ.
Comments