ಗಣೇಶ ಹಸ್ಲರ್ ಗೆ ಪ್ರಕೃತಿ ವಿಕೋಪದ ಪರಿಹಾರ ನೀಡುವಂತೆ ಒತ್ತಾಯ
- Ananthamurthy m Hegde
- Jul 3
- 1 min read

ಸಿದ್ದಾಪುರ :ಗಣೇಶ ಹಸ್ಲರ್ ಬಿಜ್ಜಾಳ ಕುಟುಂಬಕ್ಕೆ ಪ್ರಕೃತಿ ವಿಕೋಪದ ಪರಿಹಾರ ನೀಡುವಂತೆ ಒತ್ತಾಯಿಸಿ ಇಂದು ಸಿದ್ದಾಪುರ ತಾಲೂಕಿನ ವಾಜಗೋದ್ಫು ಗ್ರಾಮ ಪಂಚಾಯತ್ ನಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಕಲಾ ನಾಯ್ಕ್ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು.
ಜೂನ್ 25ರಂದು ಲಂಬಾಪುರದಲ್ಲಿ ನೀರಿನ ಚಾನೆಲ್ ಗೆ ಬಿದ್ದು ಮೃತ ಪಟ್ಟಿದ್ದ ಯುವಕ. ಕೃಷಿ ಚಟುವಟಿಕೆ ಮುಗಿಸಿ ಬರುತ್ತಿದ್ದ ವೇಳೆ ನಡೆದ ದುರ್ಘಟನೆ.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಎಸ್ಎಂ ಭಟ್, ಸದಸ್ಯರಾದ ಸುರೇಶ ನಾಯ್ಕ್, ಕೃಷ್ಣಮೂರ್ತಿ ನಾಯ್ಕ್, ಯಶೋದ ಹಸ್ಲರ್ ಪಿಡಿಓ ರಾಜೇಶ್ ನಾಯ್ಕ್ ಮತ್ತಿತರರು ಇದ್ದರು.
Comments