ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಎಮ್. ಜೆಕಿಂಗ್ಸ್ ತಂಡ
- Ananthamurthy m Hegde
- Dec 23, 2024
- 1 min read

ಮುಂಡಗೋಡದಲ್ಲಿ ನಡೆದ ಸಿಸಿಎಲ್ ಕ್ರಿಕೆಟ್ ಪಂದ್ಯಾವಳಿಯ ೫ ನೇ ಆವೃತ್ತಿಯಲ್ಲಿ ಎಮ್. ಜೆಕಿಂಗ್ಸ್ ತಂಡವು ೫೫ ರನ್ ಅಂತರದಲ್ಲಿ ಗೆಲ್ಲುವುದರ ಮುಲಕ ಚಾಂಪಿಯಯ್ ಪಟ್ಟ ಅಲಂಕರಿಸಿತು . ಕೆಲ ದಿನಗಳ ಹಿಂದೆಯೇ ಲೀಗ್ ಹಂತದ ಪಂದ್ಯಾವಳಿಗಳು ತಾಲೂಕು ಕ್ರೀಡಾಂಗಣದಲ್ಲಿ ನಡೆದವು. ಮ್.ಜೆಕಿಂಗ್ಸ್ ಹಾಗೂ ಗಂಬರ್ ಬಾಯ್ಸ್ ತಂಡದ ನಡುವೆ ರವಿವಾರ ನಡೆದ ಪೈನಲ್ ಪಂದ್ಯದಲ್ಲಿ, ಮೊದಲು ಬ್ಯಾಟ್ ಮಾಡಿದ ಎಮ್‌ಜೆ ಕಿಂಗ್ಸ್ ತಂಡವು ನಿಗದಿತ ೮ ಓವರ್ ಗಳಲ್ಲಿ ೬ ವಿಕೆಟ್‌ಗೆ ೮೮ ರನ್ ಗಳಿಸಿತು. ಗುರಿಯನ್ನು ಬೆನ್ನತ್ತಿದ ಗಂಬರ್ ತಂಡವು ೧೦ ವಿಕೆಟ್ ಕಳೆದುಕೊಂಡು ೫೫ ರನ್ ಮಾತ್ರ ಗಳಿಸಿತು . ಪೈನಲ್ ಪಂದ್ಯದಲ್ಲಿ ಎಮ್.ಜೆ ಕಿಂಗ್ಸ್ ತಂಡದ ಸಮೀರ ಶೇಖ್ ಪಂದ್ಯ ಪುರಷೋತ್ತಮ ಪ್ರಶಸ್ತಿ, ಸರಣಿಯ ಬೆಸ್ಟ್ ಬ್ಯಾಟ್ಸಮ್ಯಾನ ಪ್ರಶಸ್ತಿಯನ್ನು ಶಬಾಜ್ ಪಠಾಣ ಪಡೆದರು. ಗಂಬರ್ ಬಾಯ್ಸ್ ತಂಡದ ಆಟಗಾರ ಸಲಿಂ ಯಲಿವಾಳ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರೇ, ಬೆಸ್ಟ್ ಬೌಲರಾಗಿ ಎಮ್.ಜೆ ಕಿಂಗ್ಸ್ ಕ್ರಿಕೆರ‍್ಸ್ ತಂಡದ ಕುಮಾರ ಲಮಾಣಿ, ಬೆಸ್ಟ್ ಕಿಪರ್ ಸರಳಾ ವಾರ್ಯಯ್ಸ್ದ ಮಹೇಶ ಮಣಿ, ಬೆಸ್ಟ್ ಪೀಲ್ಡರ್ ಬಂಗಾರಿ ಹಾಗೂ ಈ ವರ್ಷದ ಉದಯೋನ್ಮುಖ ಆಟಗಾರನಾಗಿ ಮನೋಜ ಲಮಾಣಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿಗಳನ್ನೂ ಪ.ಪಂ ಮಾಜಿ ಅಧ್ಯಕ್ಷ ಫಣಿರಾಜ ಹದಳಗಿ ಮತ್ತು ಜಮೀರಹಮ್ಮದ ದರ್ಗಾವಲೆ ವಿತರಿಸಿದರು . ಕ್ರೀಡಾಕೂಟವನ್ನು ಮಂಜುನಾಥ ಕ್ಯಾಲಕೊಂಡ ಆಯೋಜಿಸಿದರು . ತುಕಾರಾಮ ತಟ್ಟಹಳ್ಳಿ ನಿರೂಪಿಸಿದರು .
Comments