ಚಂಪಾಷಷ್ಠಿ ಪ್ರಯುಕ್ತ ವಿಶೇಷ ಪೂಜೆ
- Ananthamurthy m Hegde
- Dec 7, 2024
- 1 min read
ಸಿದ್ದಾಪುರ : ಪಟ್ಟಣ ವ್ಯಾಪ್ತಿಯ ಹೆಸ್ಕಾಂ ಕಛೇರಿ ಆವರಣದಲ್ಲಿರುವ ಸುಬ್ರಹ್ಮ ಣ್ಯ ದೇವಾಲಯದಲ್ಲಿ ಶನಿವಾರ ಚಂಪಾಷಸ್ಟಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು. ಭಕ್ತರು ದೇವರಿಗೆ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದು ದೇವರ ಕೃಪೆಗೆ ಪಾತ್ರರಾದರು.
ದೇವಾಲಯದಲ್ಲಿ ಬೆಳಗ್ಗೆಯಿಂದ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು, ಕುಂಕುಮಾರ್ಚನೆ,ಮಂಗಳಾರತಿ, ಹಣ್ಣು ಕಾಯಿ ಸೇವೆ, ಕ್ಷೀರಾಭಿಷೇಕ ಇನ್ನಿತರ ಸೇವೆ ಸಲ್ಲಿಸಿದರು.
ವಿಶೇಷ ಪೂಜಾ ಕಾರ್ಯಕ್ರಮದ ನಿಮಿತ್ತ ದೇವರಿಗೆ ವಿವಿಧ ಹೂವುಗಳಿಂದ ಅಲಂಕಾರ ಮಾಡಿರುವುದು ಗಮನ ಸೆಳೆಯಿತು.
ಮಹಾಪೂಜೆ ನಂತರ ತೀರ್ಥ ಪ್ರಸಾದ ವಿತರಣೆ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಿತು. ಭಕ್ತರು ಅನ್ನ ಪ್ರಸಾದ ಸ್ವೀಕರಿಸಿ ಪುನೀತರಾದರು.
Comments