ಚಾಮುಂಡೇಶ್ವರಿ ದರ್ಶನಕ್ಕೆ ವಸ್ತ್ರ ಸಂಹಿತೆ ಜಾರಿ
- Ananthamurthy m Hegde
- Jun 27
- 1 min read

ಮೈಸೂರು: ನಾಡಿನ ಅಧಿದೇವತೆ ಚಾಮುಂಡೇಶ್ವರಿ. ತಾಯಿಯ ಸನ್ನಿಧಿಯಲ್ಲಿ ಆಷಾಢ ಪರಮ ವೈಭೋಗದಿಂದ ಕೂಡಿರುತ್ತದೆ. ಆದರೆ ಲಕ್ಷಾಂತರ ಜನ ದೇವಾಲಯಕ್ಕೆ ಬರುವಾಗ ಅವರ ವಸ್ತ್ರಗಳು ದೇವಾಲಯದ ಶಿಸ್ತಿಗೆ ಅನುಕೂಲವಾಗಿವೆಯೇ? ಎಂದು ಗಮನಿಸುವುದು ಕಷ್ಟಕರ. ಎಲ್ಲದಕ್ಕೂ ಒಂದು ನಿಯಮವಿದ್ದಂತೆ ದೇವಾಲಯ ಪ್ರವೇಶಕ್ಕೂ ನಿಯಮಗಳಿವೆ. ಆದರೆ ದಾಷ್ಟ್ರ್ಯದಿಂದ ಕೆಲವರು ಅದನ್ನು ಧಿಕ್ಕರಿಸಿ ತುಂಡು ಬಟ್ಟೆಯಲ್ಲಿ ದೇಗುಲಕ್ಕೆ ಬರುವುದುಂಟು. ಹೀಗಾಗಿ ಚಾಮುಂಡೇಶ್ವರಿ ಭಕ್ತವೃಂದದಿಂದ ವಸ್ತ್ರ ಸಂಹಿತೆಯ ಅರಿವು ಮೂಡಿಸುವ ಪ್ರಯತ್ನ ಮಾಡಲಾಯಿತು.
ಚಾಮುಂಡಿ ಬೆಟ್ಟ ವ್ಯಾಪ್ತಿಯಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನ, ದೇವಸ್ಥಾನದ ಮುಂಭಾಗ. ಹಾಗೆಯೇ ಇಡೀ ಚಾಮುಂಡಿ ಬೆಟ್ಟದಲ್ಲಿ ಸಾರ್ವಜನಿಕರಿಗೆ ವಸ್ತ್ರ ಸಂಹಿತೆ ಜಾರಿ ಮಾಡುವಂತೆ ಭಿತ್ತಿ ಪತ್ರ ಪ್ರದರ್ಶಿಸಲಾಯಿತು. ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಮುಜರಾಯಿ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರಬೇಕು ಅಂತೆಯೇ ಭಕ್ತಾದಿಗಳು ಅದನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂಬ ಉದ್ದೇಶದಿಂದ ಭಕ್ತರಿಗೆ ಗುಲಾಬಿ ನೀಡಿ ಮನವಿ ಮಾಡಲಾಯಿತು.















Comments