ಚಾಲಕನ ನಿಯಂತ್ರಣ ತಪ್ಪಿ ಗಟಾರಕ್ಕಿಳಿದ ಬಸ್ಸು
- Ananthamurthy m Hegde
- Dec 20, 2024
- 1 min read

ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿ ೬೩ ಮೇಲೆ ಆರತಿಬೈಲ್ ಘಟ್ಟದಲ್ಲಿ ಬುಧವಾರ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಗಟಾರಕ್ಕಿಳಿದು ಧರೆಗೆ ಗುದ್ದಿ ಜಖಂ ಆಗಿದೆ.
ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಹೊರಟ್ಟಿದ್ದ ಬಸ್ ಹೆದ್ದಾರಿ ತಿರುವಿನಲ್ಲಿ ನಿಯಂತ್ರಣ ತಪ್ಪಿ ಗಟಾರಕ್ಕಿಳಿದು ಜಖಂ ಆಗಿದೆ. ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಪೊಲೀಸರು ಪ್ರಕರಣ ಪರಿಶೀಲಿಸಿದ್ದಾರೆ. ಕ್ರೇನ್ ಬಳಸಿ ವಾಹನ ಮೇಲಕ್ಕೆತ್ತಿ ಸಂಚಾರ ಸುಗಮಗೊಳಿಸಲಾಯಿತು.












Comments