top of page

ಚದುರಂಗ ಆಡೋದ್ರಲ್ಲಿ ಎಲ್ಲಾ ವಿದ್ಯಾರ್ಥಿಗಳು ಎಕ್ಸ್‌ಪರ್ಟ್‌

  • Writer: Ananthamurthy m Hegde
    Ananthamurthy m Hegde
  • Dec 28, 2024
  • 1 min read

ಗುಕೇಶ್ ವಿಶ್ವ ವಿಜೇತನಾದ ಮೇಲೆ ಎಲ್ಲೆಲ್ಲೂ ಚದುರಂಗದ್ದೇ ಸುದ್ದಿಯಾಗಿದೆ . ಅದರಲ್ಲೂ ಗುಕೇಶ್-ಪ್ರಗ್ಯಾನಂದ ಒಂದೇ ಶಾಲೆಯವರು, ಅವರಿಗೆ ಒಬ್ಬರೇ ಗುರುಗಳು ಎನ್ನುವುದು ವಿಶೇಷವಾಗಿದೆ . ಹಾಗೆಯೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಚದುರಂಗದ ಹಳ್ಳಿಯೊಂದಿದೆ! ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ. ದಟ್ಟ ಕಾಡಿನ ಮಧ್ಯದ ಈ ಊರು

ಚೆಸ್ ಪರಿಣಿತರ ತವರುರಾಗಿದೆ. ಮುಂಡಗೋಡಿನ ಈ ಶಾಲೆಯ ಮಕ್ಕಳಿಗೆ ರಾಜ, ರಾಣಿ, ಕುದುರೆ, ಆನೆ ಎಂದರೆ ತುಂಬಾ ಪ್ರೀತಿ! ಹಾಗಂತ ಅವರು ಕಥಾ ಪುಸ್ತಕದ ರಾಜ ರಾಣಿಯ ಪ್ರಿಯರಲ್ಲ!‌ ಚೆಸ್ ಬೋರ್ಡ್ ನ ರಾಜ-ರಾಣಿಯ ಪ್ರಿಯರಾದ್ದಾರೆ . ಹೌದು ಈ ಊರಿನ ಪ್ರತೀ ಮನೆಯಲ್ಲೂ ಚೆಸ್ ಬೋರ್ಡ್ ಇದೆ, ಪ್ರತೀ ಮಗುವೂ ಕೂಡ ಚೆಸ್ ಆಡುತ್ತಾರೆ .

ಸುಳ್ಳಳ್ಳಿ ಎಂಬ ಈ ಗ್ರಾಮದಲ್ಲಿ ಹಿಂದುಳಿದ ಜನಾಂಗದ ಮಕ್ಕಳೇ ಜಾಸ್ತಿ. ಅವರೆಲ್ಲಾ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಾರೆ. 1ರಿಂದ 7ನೇ ತರಗತಿವರೆಗೆ 39 ಜನ ವಿದ್ಯಾರ್ಥಿಗಳಿದ್ದು, 4 ಜನ ಶಿಕ್ಷಕರಿದ್ದಾರೆ. ಕಳೆದ 2016ರಿಂದ ಶಿಕ್ಷಕ ನಾರಾಯಣ ಗೊಟಗೋಡಿಯವರ ಪ್ರಯತ್ನದಿಂದ ಜಾರಿಯಾದ ಚೆಸ್ ಆಟ, ಈಗ ಈ ಊರಿನ ಹೆಗ್ಗುರುತಾಗಿ ಮಾರ್ಪಟ್ಟಿದೆ. 10 ಬಾರಿ ರಾಜ್ಯಮಟ್ಟದಲ್ಲಿ ಸ್ಪರ್ಧೆ ಮಾಡಿ ಇಲ್ಲಿನ ಮಕ್ಕಳು ಪ್ರಶಸ್ತಿ ಪಡೆದಿದ್ದಾರೆ. 1 ನೇ ಕ್ಲಾಸಿಂದಲೇ ಮಕ್ಕಳು ಇಲ್ಲಿ ಚೆಸ್ ಅಲ್ಲಿ ಪರಿಣಿತಿ ಪಡೆಯುತ್ತಾ ಬೆಳೆಯುತ್ತಿದ್ದಾರೆ. ಮುಂಡಗೋಡಿನಿಂದ 15 ಕಿಲೋಮೀಟರ್ ದೂರದ ಈ ಊರು ನೆಕ್ಸ್ಟ್ ಗ್ರ್ಯಾಂಡ್ ಮಾಸ್ಟರ್ ನ ತವರಾಗಬಹುದು ಎನಿಸುತ್ತದೆ .

Comments


Top Stories

bottom of page