ಚಲಿಸುತ್ತಿದ್ದ ಕಂಟೇನರ್ ಲಾರಿಗೆ ಆಕಸ್ಮಿಕ ಬೆಂಕಿ
- Ananthamurthy m Hegde
- Dec 24, 2024
- 1 min read

ಯಲ್ಲಾಪುರ: ಚಲಿಸುತ್ತಿದ್ದ ಕಂಟೇನರ್ ಲಾರಿಗೆ ಆಕಸ್ಮಿಕ ಬೆಂಕಿ ಹೊತ್ತಿದ ಘಟನೆ ಯಲ್ಲಾಪುರ ಅರಬೈಲ್ ಘಟ್ಟದ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ನಡೆದಿದೆ. ಬಾಗಲಕೋಟೆಯಿಂದ ಕೇರಳಕ್ಕೆ ತೆರಳುತ್ತಿದ್ದ ಲಾರಿಗೆ ಬೆಳಗಿನ ಜಾವ 4.30ಕ್ಕೆ ಬೆಂಕಿ ಹೊತ್ತಿಕೊಂಡಿದೆ. ಬ್ರೇಕ್ ಲೈನರ್ ಹೀಟ್ ಆದ ಕಾರಣ ಬೆಂಕಿ ಹತ್ತಿಕೊಂದಿದೆ. ಸಕ್ಕರೆ ತುಂಬಿದ್ದ ಲಾರಿ ಬೆಂಕಿಗೆ ಸಂಪೂರ್ಣ ಆಹುತಿಯಾಗಿದೆ. ಡ್ರೈವರ್-ಕ್ಲೀನರ್ ಹಾಗೂ ಲಾರಿಯಿಂದ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ.
Comments