ಜ.12 ಕ್ಕೆ ಯೋಗ ಸಮ್ಮೇಳನ ಹಾಗೂ ಸ್ಪರ್ಧೆ
- Ananthamurthy m Hegde
- Jan 1
- 1 min read
ಯಲ್ಲಾಪುರ: ತಾಲೂಕು ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್, ಅಡಕೆ ವ್ಯವಹಾರಸ್ಥರ ಸಂಘಗಳ ಆಶ್ರಯದಲ್ಲಿ ಯೋಗ ಸಮ್ಮೇಳನ ಹಾಗೂ ಸ್ಪರ್ಧೆ ಜ.12 ರಂದು ಪಟ್ಟಣದ ವೇದವ್ಯಾಸ ಸಭಾಭವನದಲ್ಲಿ ನಡೆಯಲಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ ಹೇಳಿದರು.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 8 ರಿಂದ 80 ವರ್ಷದೊಳಗಿನ ಎಲ್ಲರೂ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. 7 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಸಂಘಟನೆಯಿಂದ ಮೊದಲೇ ಸೂಚಿಸಿದ 10 ಆಸನಗಳಲ್ಲಿ 5 ಆಸನಗಳನ್ನು ಸ್ಪರ್ಧಾಳುಗಳು ಪ್ರದರ್ಶಿಸಬೇಕು ಎಂದು ವಿವರಿಸಿದರು.
ಆಸಕ್ತರು ಜ.8 ರ ಒಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ನೋಂದಣಿಗಾಗಿ ಸದಾನಂದ ದಬಗಾರ, ಶಿವಪ್ರಸಾದ ಭಟ್ಟ, ವಿಶಾಲಾಕ್ಷಿ ಭಟ್ಟ, ನಾರಾಯಣ ಸಭಾಹಿತ ಅವರನ್ನು ಸಂಪರ್ಕಿಸಬಹುದು ಎಂದರು.
ಅಸೋಸಿಯೇಷನ್ ತಾಲೂಕು ಉಪಾಧ್ಯಕ್ಷ ನಾಗೇಶ ರಾಯ್ಕರ್, ಅಡಕೆ ವರ್ತಕ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ ಇದ್ದರು.
Comments