ಜ.5 ರಂದು ಶಿರಸಿಯಲ್ಲಿ ಸಂಗೀತ ಕಾರ್ಯಕ್ರಮ
- Ananthamurthy m Hegde
- Jan 1
- 1 min read
ಧಾರವಾಡದ ಸ್ವರ ಸಾಮ್ರಾಟ ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಜ.5 ರಂದು ಶಿರಸಿಯ ಟಿಎಮ್ಎಸ್ ಸಭಾಭವನದಲ್ಲಿ ನಾ ರಾಜಗುರು ಸಂಗೀತ ನಾಟಕ ಹಾಗೂ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಸದಸ್ಯ ನಿಜಗುಣ ರಾಜಗುರು ತಿಳಿಸಿದರು. ಟಿಎಂಎಸ್ ಸಭಾಭವನದಲ್ಲಿ ಸಂಜೆ 5.30 ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಹಿರಿಯ ಸಂಗೀತ ಕಲಾವಿದ ಗಣಪತಿ ಭಟ್ ಹಾಸಣಗಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಹಾಗೂ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಬಸವರಾಜ ರಾಜಗುರು ಮೊಮ್ಮಗ ವಿಶ್ವರಾಜ ನಿಜಗುಣ ರಾಜಗುರು ಇವರು ಏಕಪಾತ್ರಾಭಿನಯ ನಡೆಸಿಕೊಡಲಿದ್ದಾರೆ ಎಂದರು. ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಸದಸ್ಯೆ ಭಾರತಿದೇವಿ ರಾಜಗುರು ಉಪಸ್ಥಿತರಿರುವರು.
Comentarios