ಜ.8 ರಿಂದ 12ರವರೆಗೆ ಕುಮಟಾ ಸ್ನೇಹ ಸಂಭ್ರಮ
- Ananthamurthy m Hegde
- Dec 26, 2024
- 1 min read
ಕುಮಟಾ : ಕುಮಟಾದ ಜನರಿಗಾಗಿ ಧಾರ್ಮಿಕ, ಆರೋಗ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ರೂಪಿಸುವ ಉದ್ದೇಶದಿಂದ ಡಾ. ಅಭಯ ಗುರೂಜಿ ಸಾರಥ್ಯದಲ್ಲಿ ಲಯನ್ಸ್ ಕ್ಲಬ್ ಕುಮಟಾ ಆಶ್ರಯದೊಂದಿಗೆ ಜ.೮ ರಿಂದ ೧೨ರವರೆಗೆ ಪಟ್ಟಣದ ಮಣಕಿ ಮೈದಾನದಲ್ಲಿ ಕುಮಟಾ ಸ್ನೇಹ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಲಯನ್ಸ್ ಕ್ಲಬ್ ನ ವಿಷ್ಣು ಪಟಗಾರ ಹೇಳಿದರು.
ಅವರು ಪಟ್ಟಣದ ಲಯನ್ಸ್ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಅಭಯ ಗುರೂಜಿಯವರು ಮೂಲತಃ ಮಂಡ್ಯದವರಾಗಿದ್ದು, ಆರೋಗ್ಯ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬಂದವರು. ಅವರು ಕುಮಟಾ ಜನರಿಗೆ ಅನುಕೂಲವಾಗಲಿ ಹಾಗೂ ಸುತ್ತಮುತ್ತಲಿನವರಿಗೆ ಅನುಕೂಲವಾಗಬೇಕು ಎಂಬ ಆಶಯದೊಂದಿಗೆ ಲಯನ್ಸ್ ಕ್ಲಬ್ ಜೊತೆಗೆ ಸೇರಿ, ಕಾರ್ಯಕ್ರಮಗಳನ್ನು ಕುಮಟಾದಲ್ಲಿ ಸಂಘಟಿಸುತ್ತಿದ್ದಾರೆ ಎಂದರು.
ಜ.೮ ರಂದು ಉಮಾ, ಅರುಣ್ ಹಾಗೂ ತಂಡದಿಂದ ಜಾನಪದ ನೃತ್ಯ ಕಾರ್ಯಕ್ರಮ, ಜ.೯ ಸುಶ್ಮಿತಾ, ಜಗ್ಗಪ್ಪ, ಹುಲಿ ಕಾರ್ತಿಕ್, ನಿಂಗರಾಜು ಮಂಡ್ಯ ಹಾಗೂ ಕಾಮಿಡಿ ಕಿಲಾಡಿಗಳು ತಂಡದಿಂದ ಕಾರ್ಯಕ್ರಮ, ಜ.೧೦ ರಂದು ಸ್ಥಳೀಯ ಕಾರ್ಯಕ್ರಮ, ಜ.೧೧ ರಂದು ಡಿ.ಕೆ.ಡಿ ತಂಡದಿಂದ ನಗೆಹಬ್ಬ, ಜ.೧೨ ರಂದು ರಾಜಗುರು ಹೊಸಕೋಟೆ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.
ಜೊತೆಗೆ ವಾಗ್ಮಿ ಪಾವಗಡ ಪ್ರಕಾಶರಾವ್ ಅವರೂ ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದು ಅವರ ಪ್ರವಚನ ನಡೆಸಲು ಯೋಜಿಲಾಗಿದೆ. ಕುಮಟಾದ ಪ್ರಸಿದ್ಧ ವ್ಯಕ್ತಿಗಳು, ಶಾಸಕರು ಸಭೆಯಲ್ಲಿ ಇರಲಿದ್ದಾರೆ. ಕುಮಟಾದ ಲಯನ್ಸ್ ಕ್ಲಬ್ ಹಲವಾರು ಸೇವೆ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಒಂದು ಒಳ್ಳೆಯ ಕಾರ್ಯಕ್ರಮಕ್ಕೆ ಜೊತೆಯಾಗಿರುವುದು ಲಯನ್ಸ್ ಕ್ಲಬ್ ಗೆ ಹೆಮ್ಮೆ ಇದೆ ಎಂದರು.
ಉದ್ಯಮಿ ಶ್ರೀಧರ ಭಾಗ್ವತ್ ಮಾತನಾಡಿ, ಇದು ಕೇವಲ ಹಬ್ಬದಂತೆ ಆಚರಣೆ ಮಾಡುವುದಲ್ಲ. ಸಮಾಜಕ್ಕೆ ಒಳಿತು ಮಾಡುವ ಕಾರ್ಯ ಇದು. ಸಂಖ್ಯಾಶಾಸ್ತ್ರಜ್ಞ ಹಾಗೂ ಜ್ಯೋತಿಷ್ಯ ಶಾಸ್ತ್ರಜ್ಞರಾಗಿರುವ ಡಾ. ಅಭಯ್ ಗುರೂಜಿ ಅವರ ಸಾರಥ್ಯದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಜನತೆಗೆ ಅನುಕೂಲತೆ ಕಲ್ಪಿಸುವುದು ತಮ್ಮ ಮೊದಲ ಆದ್ಯತೆ ಹಾಗಾಗಿ ಜನರ ಸಂಪೂರ್ಣ ಸಹಕಾರ ಅಗತ್ಯವಾಗಿದೆ. ತನು, ಮನ, ಧನದ ಸಹಕಾರ ಅಗತ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ರಾಮಚಂದ್ರ ಭಟ್ಟ, ಲಯನ್ಸ್ ರೇವಣಕರ ಚಾರಿಟೇಬಲ್ ಟ್ರಸ್ಟ್ ಮೂಲಕ ನಾವು ಜನರಿಗೆ ಆರೋಗ್ಯ ಸೇವೆಯನ್ನು ನೀಡುತ್ತಿದ್ದೇವೆ. ತಾಲೂಕು ಹಾಗೂ ಜಿಲ್ಲೆಯಾದ್ಯಂತ ಬಡವರಿಗೆ ಉಚಿತ ಕ್ಯಾಂಪುಗಳನ್ನು ಹಮ್ಮಿಕೊಂಡು ಸೇವೆ ನೀಡುತ್ತಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟಕ ಲಕ್ಷ್ಮಣ ಪಟಗಾರ, ಎಂ.ಕೆ ಶಾನಭಾಗ, ರಾಮಚಂದ್ರ ಪಟಗಾರ, ಜನಾರ್ಧನ ಪಟಗಾರ, ಲಕ್ಷ್ಮಣ ಪಟಗಾರ, ಮಂಜುನಾಥ ಪಟಗಾರ, ಎಂ.ಎನ್ ಹೆಗಡೆ ಸ್ವಾಗತಿಸಿದರು.
Comments