top of page

ಜಿ.ಎನ್ ಹೆಗಡೆ ಹಿರೇಸರಗೆ ಗೌರವ

  • Writer: Ananthamurthy m Hegde
    Ananthamurthy m Hegde
  • Dec 20, 2024
  • 1 min read


ಯಲ್ಲಾಪುರ: ತಾಲೂಕಿನ ಶ್ರೀಮಾತಾ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಜಿ.ಎನ್.ಹೆಗಡೆ ಹಿರೇಸರ ಅವರು ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ಹಿನ್ನೆಲೆಯಲ್ಲಿ ಸಹಕಾರಿಯ ಯಲ್ಲಾಪುರ ಶಾಖೆಯಲ್ಲಿ ಶಾಖಾ ಸಲಹಾ ಸಮಿತಿಯಿಂದ ಅವರನ್ನು ಗೌರವಿಸಿ, ಅಭಿನಂದಿಸಲಾಯಿತು. ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಭಟ್ಟ, ಶಾಖಾ ಸಲಹಾ ಸಮಿತಿ ಅಧ್ಯಕ್ಷ ಕೆ.ಎಸ್.ಭಟ್ಟ ಆನಗೋಡ, ನಿರ್ದೇಶಕ ರವೀಂದ್ರ ಹೆಗಡೆ, ಸಿಬ್ಬಂದಿ ಸಿ.ಎಸ್.ಪತ್ರೆಕರ್, ಶಾಖಾ ವ್ಯವಸ್ಥಾಪಕ ವಿನೋದ ಮರಾಠಿ ಇತರರಿದ್ದರು.

Comments


Top Stories

bottom of page