ಜಿಲ್ಲೆಯ ಪೊಲೀಸ್ ಸಿಬ್ಬಂದಿಗೆ ರಾಜ್ಯಮಟ್ಟದ ಪ್ರಶಸ್ತಿ
- Ananthamurthy m Hegde
- Nov 22, 2024
- 1 min read

ಶಿರಸಿ: ಬೆಂಗಳೂರಿನಲ್ಲಿ ನಡೆದ ೬ನೇ ರಾಜ್ಯ ಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ಉತ್ತರ ಕನ್ನಡ ಜಿಲ್ಲೆಯ ಪಿ.ಎಸ್.ಐ ರಾಜಕುಮಾರ ಉಕ್ಕಲಿ, ಶಿರಸಿ ಎನ್.ಎಂ ಪೊಲೀಸ್ ಠಾಣೆ, ಪಿಂಗರ್ ಪ್ರಿಂಟ್ ವಿಭಾಗ ಸಿಹೆಚ್Àಸಿ ೬೪೪ ರೋನಾಲ್ಡ ಅಲ್ಮೇಡಾ, ಶಿರಸಿ ಗ್ರಾಮೀಣ ಪೊಲೀಸ್ ಠಾಣೆ, ಕಂಪ್ಯೂಟರ್ ಅವರನೇಸ್ ವಿಭಾಗ, ಎಪಿಸಿ ೬೫ ಈರಪ್ಪ ಕೆಳಗಿನಮನಿ ಡಿ.ಎ.ಆರ್ ಕಾರವಾರ, ಎಕ್ಸೇಸ್ ಕಂಟ್ರೋಲ್ ವಿಭಾಗ, ಸಿಪಿಸಿ ೯೨೧ ಸತ್ಯಾನಂದ ಕಾರವಾರ ಸಂಚಾರ ಠಾಣೆ, ಕ್ರೈಂ ಸೀನ್ ಅಬ್ಸರವೇಶನ್ ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದಿರುತ್ತಾರೆ. ರಾಜ್ಯ ಮಟ್ಟದಲ್ಲಿ ಪಶ್ಚಿಮ ವಲಯವು ಬೆಸ್ಟ್ ರೇಂಜ್ ಟ್ರೋಫಿಯನ್ನು ಗಳಿಸಿದೆ. ಪ್ರಶಸ್ತಿ ಪಡೆದ ಪೊಲೀಸ್ ಸಿಬ್ಬಂದಿಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖಾ ವತಿಯಿಂದ ಅಭಿನಂದಿಸಲಾಗಿದೆ.















Comments