ಜಿಲ್ಲೆಯಲ್ಲಿ ಸರಕಾರಿ ಭತ್ತ, ಜೋಳದ ಖರೀದಿ ಕೇಂದ್ರಗಳನ್ನು ತೆರೆಯಲು ಆಗ್ರಹ
- Ananthamurthy m Hegde
- Nov 8, 2024
- 1 min read
ಸಿದ್ದಾಪುರ : ಶೀಘ್ರದಲ್ಲೇ ಸರಕಾರ ಭತ್ತ ಹಾಗೂ ಜೋಳದ ಖರೀದಿ ಕೇಂದ್ರಗಳನ್ನು ಜಿಲ್ಲೆಯಲ್ಲಿ ತೆರೆಯಬೇಕು ಎಂದು ಜಿಲ್ಲಾ ರೈತ ಮುಖಂಡ ವೀರಭದ್ರ ನಾಯ್ಕ ಒತ್ತಾಯ ಮಾಡಿದ್ದಾರೆ.
ಜಿಲ್ಲೆಯಲ್ಲಿ ಈ ವರ್ಷ ಭಾರೀ ಮಳೆ ಸುರಿದಿದ್ದು ಭತ್ತ ಹಾಗೂ ಜೋಳದ ಬೆಳೆಗಳು ನಾಶವಾಗಿದೆ, ಪ್ರಕೃತಿ ವಿಕೋಪದಿಂದ ಹಾನಿಯಾದ ಗದ್ದೆಗಳನ್ನು ಪುನಃ ನಾಟಿ ಮಾಡಿ ರೈತರು ಬೆಳೆಗಳನ್ನು ಬೆಳೆದಿದ್ದಾರೆ, ಈಗ ಭತ್ತದ ಮತ್ತು ಜೋಳದ ಕಟಾವು ಆರಂಭವಾಗಿದ್ದು ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ ಜಿಲ್ಲೆಯಲ್ಲಿ ಭತ್ತ ಹಾಗೂ ಜೋಳದ ಖರೀದಿ ಕೇಂದ್ರಗಳನ್ನು ತೆರೆದು ರೈತರಿಗೆ ನೆರವಾಗಬೇಕು. ಇಲ್ಲದಿದ್ದರೆ ಖಾಸಗಿ ವ್ಯಾಪಾರಸ್ಥರು ಅರ್ಧ ರೇಟಿಗೆ ಖರೀದಿ ಮಾಡಿ ರೈತರಿಗೆ ನಷ್ಟ ಉಂಟು ಮಾಡುತ್ತಾರೆ. ಸರ್ಕಾರ ಖರೀದಿ ಕೇಂದ್ರಗಳನ್ನ ತೆರೆಯದಿದ್ದರೆ ಪ್ರತಿಭಟನೆಯನ್ನು ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಮ್ಮ ಜಿಲ್ಲೆಯಲ್ಲಿ ೪೬,೪೧೦ ಹೆಕ್ಟರ್ ಭತ್ತ ಇದೆ ೯,೪೮೦ ಹೆಕ್ಟರ್ ಜೋಳ ಬೆಳೆ ಇದೆ, ಬನವಾಸಿ ಮುಂಡಗೋಡ್ ಹಳಿಯಾಳ ಶಿರಸಿ ಸಿದ್ದಾಪುರದಲ್ಲಿ ಖರೀದಿ ಕೇಂದ್ರವನ್ನು ಪ್ರಾರಂಭಿಸಬೇಕು ಎಂದು ಒತ್ತಾಯ ಮಾಡಿದರು.














Comments