ಜು.೧೦ ರಂದು ಸಂಸ್ಥಾನ ತರಳಿಮಠದಲ್ಲಿ ಗುರುವಂದನಾ ಕಾರ್ಯಕ್ರಮ
- Ananthamurthy m Hegde
- Jul 7
- 1 min read
ಸಿದ್ದಾಪುರ : ತಾಲೂಕಿನ ಸಂಸ್ಥಾನ ತರಳಿಮಠದಲ್ಲಿ ಗುರು ಪೂರ್ಣಿಮೆ ನಿಮಿತ್ತ ಗುರುವಂದನಾ ಹಾಗೂ ವಿವಿಧ ಕಾರ್ಯಕ್ರಮ ಜು.೧೦ರಂದು ಬೆಳಗ್ಗೆ ೯ರಿಂದ ನಡೆಯಲಿದೆ ಎಂದು ಮಠದ ಟ್ರಸ್ಟಿ ಎಂ.ಐ.ನಾಯ್ಕ ಹೇಳಿದರು.
ಪಟ್ಟಣದಲ್ಲಿ ಗುರುವಂದನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಜು.೧೦ರಂದು ಬೆಳಗ್ಗೆ ಶ್ರೀ ಯೋಗೇಂದ್ರ ಅವಧೂತ ಶ್ರೀಗಳ ಸ್ವಾಗತ, ಕಾರ್ಯಕ್ರಮ ಉದ್ಘಾಟನೆ, ಗುರುಗೀತೆ, ರುದ್ರಾಭಿಷೇಕ, ಪಾದಪೂಜೆ, ಪ್ರಾಸ್ತಾವಿಕ ನುಡಿ, ಶ್ರೀಗಳ ಆಶೀರ್ವಚನ, ಅನ್ನಸಂತರ್ಪಣೆ ನಡೆಯಲಿದೆ. ವಿಶೇಷವಾಗಿ ಹೊನ್ನೆಬೀಡಾರದ ಶ್ರೀ ಬೀರೇಶ್ವರ ಭಜನಾ ಮಂಡಳಿ ಇವರಿಂದ ನಿರಂತರ ಭಜನೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಶಾಸಕ ಭೀಮಣ್ಣ ನಾಯ್ಕ, ಸ್ಥಳೀಯ ಜನಪ್ರತಿನಿಧಿಗಳು, ಹಾಗೂ ಗಣ್ಯರು ಉಪಸ್ಥಿತರಿರುತ್ತಾರೆ ಎಂದರು. ಈ ಸಂದರ್ಭದಲ್ಲಿ ಟ್ರಸ್ಟ್ ಸದಸ್ಯರಾದ ದಿನೇಶ ನಾಯ್ಕ್, ಬಂಗಾರ್ಯ ನಾಯ್ಕ್, ಎ. ಜಿ. ನಾಯ್ಕ್, ರಾಜಾರಾಮ ನಾಯ್ಕ್ ಉಪಸ್ಥಿತರಿದ್ದರು.
Comments