top of page

ಟೂರ್ನಮೆಂಟ್ ಪ್ರೈಜ್ ಮನಿಗಿಂತ ಅಧಿಕ ಸಂಭಾವನೆ ಪಡೆಯುವ 6 ಆಟಗಾರರು

  • Writer: Ananthamurthy m Hegde
    Ananthamurthy m Hegde
  • Mar 22
  • 1 min read

ಹೊಸದಿಲ್ಲಿ : 2008ರಲ್ಲಿ ಆರಂಭವಾದ ಐಪಿಎಲ್ ( Indian Premier League) ಕ್ರೀಡಾಕೂಟದ 18ನೇ ಆವೃತ್ತಿ ಇಂದು (ಮಾ. 22) ಆರಂಭಗೊಳ್ಳಲಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುವ ಆರಂಭಿಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯಲಿದೆ.

ಆರಂಭಿಕ ಪಂದ್ಯಕ್ಕೆ ಕಲಾವಿದರು ವಿಶೇಷ ಸ್ಪರ್ಶವನ್ನು ನೀಡಲಿದ್ದಾರೆ. ಬಾಲಿವುಡ್ ತಾರೆಯರು ಪ್ರೇಕ್ಷಕರನ್ನು ಭರಪೂರ ರಂಜಿಸಲಿದ್ದಾರೆ. ಗಾಯಕಿ ಶ್ರೇಯಾ ಘೋಷಾಲ್, ನಟಿ ದಿಶಾ ಪಟಾನಿ ಕಳೆ ತುಂಬಲಿದ್ದಾರೆ. ಉದ್ಘಾಟನಾ ಸಮಾರಂಭ ಸಂಜೆ 6.30ಕ್ಕೆ ಆರಂಭವಾಗಲಿದೆ.

ಹಾಲೀ ಐಪಿಎಲ್ - 2025 ಆವೃತ್ತಿಯಲ್ಲಿ ಆರು ಆಟಗಾರರು ಟೂರ್ನಮೆಂಟ್ ಬಹುಮಾನಕ್ಕಿಂತ ಅಧಿಕ ಮೊತ್ತವನ್ನು ಪಡೆಯಲಿದ್ದಾರೆ. ಟೂರ್ನಮೆಂಟ್ ಗೆಲ್ಲುವವರಿಗೆ 20 ಕೋಟಿ ರೂಪಾಯಿ ಬಹುಮಾನ ಸಿಗಲಿದೆ. ಆದರೆ, ಈ ಆರು ಆಟಗಾರರು ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಸೇಲ್ ಆಗಿದ್ದಾರೆ.

ಪಶ್ಚಿಮ ಬಂಗಾಳದ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಆರಂಭಿಕ ಪಂದ್ಯಕ್ಕೆ ಮಳೆಯ ಭೀತಿ ಎದುರಾಗುವ ಸಾಧ್ಯತೆಯಿದೆ. ಆರೆಂಜ್ ಅಲರ್ಟ್ ನೀಡಲಾಗಿದ್ದು, ಪಂದ್ಯ ಆಡುವ ಸಾಧ್ಯತೆ 50 : 50 ಎಂದು ಎಚ್ಚರಿಕೆಯನ್ನು ನೀಡಿದೆ. ನಿನ್ನೆ (ಮಾ. 21) ಉಭಯ ಫ್ರಾಂಚೈಸ್ ಗಳಿಗೆ ಪ್ರಾಕ್ಟೀಸ್ ನಡೆಸಲೂ ಮಳೆ ಬಿಟ್ಟಿರಲಿಲ್ಲ.

ಐಪಿಎಲ್ ವಿಜೇತ ತಂಡಕ್ಕೆ ಬಹುಮಾನದ ಮೊತ್ತ 20 ಕೋಟಿ ರೂಪಾಯಿ. ಗಮನಿಸಬೇಕಾದ ವಿಚಾರ ಏನಂದರೆ, ವಿವಿಧ ತಂಡಗಳ ಪರವಾಗಿ ಆಡುತ್ತಿರುವ ಆರು ಆಟಗಾರರು, ಈ ಮೊತ್ತಕ್ಕಿಂತಲೂ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿದ್ದಾರೆ. ಇನ್ನು, ಒಂಬತ್ತು ಆಟಗಾರರನ್ನು, ತಲಾ 18 ಕೋಟಿಗೆ ವಿವಿಧ ಫ್ರಾಂಚೈಸ್ ಗಳು ಖರೀದಿಸಿವೆ.

ಇದುವರೆಗೆ ರಾಯಲ್ ಚಾಲೆಂಜರ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ 34 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಕೆಕೆಆರ್ ತಂಡ 20 ಮತ್ತು ಬೆಂಗಳೂರು ತಂಡ 14 ಬಾರಿ ಗೆಲುವನ್ನು ಸಾಧಿಸಿದೆ ಈ ಬಾರಿ, ಆಟಗಾರರು ಪ್ರತೀ ಪಂದ್ಯಕ್ಕೆ ಪ್ರತ್ಯೇಕ ಸಂಭಾವನೆಯನ್ನು ಪಡೆಯಲಿದ್ದಾರೆ.

ಟೂರ್ನಮೆಂಟ್ ಮೊತ್ತಕ್ಕಿಂತ ಹೆಚ್ಚು ಸಂಭಾವನೆ ಪಡೆಯುವ ಆರು ಆಟಗಾರರು:

ಸಂಖ್ಯೆ

ಆಟಗಾರರ ಹೆಸರು

ಖರೀದಿಯಾದ ಮೊತ್ತ (ಕೋಟಿ)

ಫ್ರಾಂಚೈಸ್

1

ರಿಷಭ್ ಪಂತ್

27

ಲಕ್ನೋ ಸೂಪರ್ ಜಯಂಟ್ಸ್

2

ಶ್ರೇಯಸ್ ಐಯ್ಯರ್

26.75

ಕೋಲ್ಕತ್ತಾ ನೈಟ್ ರೈಡರ್ಸ್

3

ವೆಂಕಟೇಶ್ ಐಯ್ಯರ್

23.75

ಕೋಲ್ಕತ್ತಾ ನೈಟ್ ರೈಡರ್ಸ್

4

ಹೆನ್ರಿಕ್ ಕ್ಲಾಸೆನ್

23

ಸನ್ ರೈಸರ್ಸ್ ಹೈದಾರಾಬಾದ್

5

ವಿರಾಟ್ ಕೊಹ್ಲಿ

21

ರಾಯಲ್ ಚಾಲೆಂಜರ್ಸ್ ಬೆಂಗಳೂರು

6

ನಿಕೊಲಸ್ ಪೊರನ್

21

ಲಕ್ನೋ ಸೂಪರ್ ಜಯಂಟ್ಸ್

18 ಕೋಟಿ ಸಂಭಾವನೆ ಪಡೆದ 9 ಆಟಗಾರರು : ಪ್ಯಾಟ್ ಕಮ್ಮಿನ್ಸ್, ರಶೀದ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ, ಋತುರಾಜ್ ಗಾಯಕ್ವಾಡ್, ಜಸ್ಪ್ರೀತ್ ಬುಮ್ರಾ, ಯಜುವೇಂದ್ರ ಚಹಲ್, ಅರ್ಷದೀಪ್ ಸಿಂಗ್.

Comments


Top Stories

bottom of page