top of page

ಡೋಪಿಂಗ್ ಪರೀಕ್ಷೆ: ಕಾಂಗ್ರೆಸ್ ಸೇರಿದ್ದ ಅಥ್ಲೀಟ್ Vinesh Phogat ಗೆ NADA ನೋಟಿಸ್

  • Oct 22, 2024
  • 1 min read

ಕುಸ್ತಿಪಟು ವಿನೇಶ್​ ಪೋಗಟ್​ ಅವರು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಪ್ರಾಧಿಕಾರ (ನಾಡಾ) ನಡೆಸುವ ಪರೀಕ್ಷೆಯಿಂದ ತಪ್ಪಿಸಿಕೊಂಡಿದ್ದು, ಈ ಸಂಬಂಧ ಪ್ರಾಧಿಕಾರ ನೋಟಿಸ್​​ ಜಾರಿ ಮಾಡಿದೆ.












ಚಂಡೀಘಡ: ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಅಥ್ಲೀಟ್ ವಿನೇಶ್ ಫೋಗಟ್ ಗೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಪ್ರಾಧಿಕಾರ (ನಾಡಾ) ನೋಟಿಸ್ ನೀಡಿದೆ.

ಹೌದು.. ಕುಸ್ತಿಪಟು ವಿನೇಶ್​ ಪೋಗಟ್​ ಅವರು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಪ್ರಾಧಿಕಾರ (ನಾಡಾ) ನಡೆಸುವ ಪರೀಕ್ಷೆಯಿಂದ ತಪ್ಪಿಸಿಕೊಂಡಿದ್ದು, ಈ ಸಂಬಂಧ ಪ್ರಾಧಿಕಾರ ನೋಟಿಸ್​​ ಜಾರಿ ಮಾಡಿದೆ.

ಹರಿಯಾಣದ ಸೋನಿಪತ್‌ನಲ್ಲಿರುವ ವಿನೇಶ್ ಅವರ ನಿವಾಸಕ್ಕೆ ಡೋಪ್ ನಿಯಂತ್ರಣ ಅಧಿಕಾರಿಯನ್ನು ಸೆಪ್ಟೆಂಬರ್ 9 ರಂದು ಕಳುಹಿಸಲಾಗಿತ್ತು. ಆ ವೇಳೆ ಕುಸ್ತಿಪಟು ಮನೆಯಲ್ಲಿ ಇರಲಿಲ್ಲ. ಮಾಹಿತಿ ಕೊರತೆ ಹಿನ್ನೆಲೆಯಲ್ಲಿ ಪೋಗಟ್​ ಗೆ ನಾಡಾ ನೋಟಿಸ್​ ನೀಡಿದ್ದು, 14 ದಿನಗಳ ಒಳಗೆ ಉತ್ತರ ನೀಡುವಂತೆ ಸೂಚಿಸಿದೆ.

ಎಡಿಆರ್‌ ಪ್ರಕಾರ, ತಾವು ಇರುವ ನಿವಾಸದ ಬಗ್ಗೆ ಮಾಹಿತಿ ನೀಡಲು ಕುಸ್ತಿಪಟು ವಿಫಲವಾಗಿದ್ದಾರೆ. ಈ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ತಮ್ಮ ಅಭಿಪ್ರಾಯವನ್ನು ಕೋರಲಾಗಿದೆ. ಹೀಗಾಗಿ ನೋಟಿಸ್​​ ಜಾರಿಯಾದ ದಿನದಿಂದ 14 ದಿನಗಳ ಒಳಗೆ ಮಾಹಿತಿ ಹಂಚಿಕೊಳ್ಳಿ ಎಂದು ನೋಟಿಸ್​​ನಲ್ಲಿ ಸೂಚಿಸಲಾಗಿದೆ.

ವಿಶ್ವ ಡೋಪಿಂಗ್ ವಿರೋಧಿ ಪ್ರಾಧಿಕಾರದ ನಿಯಮಗಳ ಪ್ರಕಾರ, ಕುಸ್ತಿಪಟುಗಳು ನೋಂದಾಯಿತ ಪರೀಕ್ಷಾ ಪೂಲ್‌ನ ಭಾಗವಾಗಿದ್ದಾರೆ. ಆದ್ದರಿಂದ ಅವರು ಅಗತ್ಯವಿದ್ದಲ್ಲಿ ಪರೀಕ್ಷೆಗೆ ಲಭ್ಯವಾಗುವಂತಹ ದಿನ, ಸ್ಥಳದ ಮಾಹಿತಿ ನೀಡಬೇಕು. ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ವಿನೇಶ್, ನೋಂದಾಯಿತ ಪರೀಕ್ಷಾ ಪೂಲ್‌ನ ಭಾಗವಾಗಿದ್ದಾರೆ. ಹೀಗಾಗಿ ಅವರನ್ನು ಡೋಪಿಂಗ್​ ಪರೀಕ್ಷೆಗೆ ಒಳಪಡಿಸಬೇಕಿದೆ.

ಪ್ಯಾರಿಸ್ ಒಲಂಪಿಕ್ ಕ್ರೀಡಾಕೂಟದಲ್ಲಿ ಫೈನಲ್​​ಗೂ ಮುನ್ನ ಅಧಿಕ ತೂಕದ ಕಾರಣ ಅನರ್ಹಗೊಂಡ ವಿನೇಶ್​​ ಪೋಗಟ್​​ ಬಳಿಕ ಕಾಂಗ್ರೆಸ್​ ಪಕ್ಷ ಸೇರಿ ರಾಜಕೀಯ ದಂಗಲ್​ ಆರಂಭಿಸಿದ್ದಾರೆ. ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಈಗಾಗಲೇ ಅವರು ಕಾಂಗ್ರೆಸ್​​ನಿಂದ ಜೂಲಾನಾ ಕ್ಷೇತ್ರಕ್ಕೆ ಸ್ಪರ್ಧಿಸಿದ್ದಾರೆ.

Comentários


Top Stories

bottom of page