top of page

ಡಿ.೧೪ರಿಂದ ವೈಪಿಎಲ್ ನಾಲ್ಕನೇ ಆವೃತ್ತಿ ಆರಂಭ

  • Writer: Ananthamurthy m Hegde
    Ananthamurthy m Hegde
  • Nov 24, 2024
  • 1 min read

ಯಲ್ಲಾಪುರ: ಡಿ.೧೪ರಿಂದ ವೈಪಿಎಲ್ ನಾಲ್ಕನೇ ಆವೃತ್ತಿಯ ಟೂರ್ನಿ ೨೧ ದಿನಗಳ ಕಾಲ ನಡೆಯಲಿದೆ ಎಂದು ಯಲ್ಲಾಪುರ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸತೀಶ ನಾಯ್ಕ ಹೇಳಿದರು.

ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈವರೆಗೆ ೮ ತಂಡಗಳು ಭಾಗವಹಿಸುತ್ತ ಬಂದಿದ್ದವು. ಈ ಬಾರಿ ಇನ್ನೊಂದು ತಂಡ ಹೆಚ್ಚಿಸಲಾಗಿದ್ದು, ಹೆಚ್ಚುವರಿಯಾಗಿ ೧೬ ಆಟಗಾರರಿಗೆ ಅವಕಾಶ ಸಿಗಲಿದೆ ಎಂದರು.

ಕಾಳಮ್ಮನಗರದ ತಾಲೂಕು ಕ್ರೀಡಾಂಗಣದಲ್ಲಿ ಟೂರ್ನಿ ನಡೆಯಲಿದೆ. ವಿಜೇತರಿಗೆ ಟ್ರೋಫಿ ಜೊತೆಗೆ ೧,೦೧,೧೧೧ ರೂ ನಗದು, ರನ್ನರ್ಸ್ ಅಪ್ ತಂಡಕ್ಕೆ ೭೫,೫೫೫ ರೂ ನಗದು ಬಹುಮಾನ ನೀಡಲಾಗುವುದು. ವಿವಿಧ ವಿಭಾಗಗಳಿಗೆ ವೈಯಕ್ತಿಕ ಪ್ರಶಸ್ತಿಗಳನ್ನೂ ನೀಡಲಾಗುವುದು. ಟೂರ್ನಿಯ ಎಲ್ಲಾ ಪಂದ್ಯಗಳ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿದೆ. ಜನವರಿ ೫ ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು ವಿವರಿಸಿದರು. ಯಲ್ಲಾಪುರದಲ್ಲಿ ಹೊಸ ಆಟಗಾರರನ್ನು ರೂಪಿಸುವುದು, ಹೊಸಬರಿಗೆ ಅವಕಾಶ ನೀಡುವುದು ಈ ಟೂರ್ನಿಯ ಉದ್ದೇಶವಾಗಿದೆ. ಯುವ ಪ್ರತಿಭಾವಂತ ಆಟಗಾರರು ಈ ವೇದಿಕೆಯನ್ನು ಬಳಸಿಕೊಂಡು ಬೆಳೆಯುತ್ತಿರುವುದು ಸಂತಸದ ಸಂಗತಿ ಎಂದರು. ಅಸೋಸಿಯೇಷನ್ ಪ್ರಮುಖರಾದ ನಾಗರಾಜ ಕವಡಿಕೆರೆ, ಸಚಿನ ಕುಂದೂರ, ಅಕ್ಬರ್ ಅಲಿ, ರಾಘು ಜಡ್ಡಿಪಾಲ, ಅಭಿಷೇಕ ಬೋರ್ಕರ್, ಸುಜಿತ್ ಜೋಲಾಪುರ, ಅಜಗರ್ ಅಲಿ, ವಿಕಾಸ ನಾಯ್ಕ, ಗೌತಮ ಕಾಮತ್, ರಂಜಿತ, ಮಾರುತಿ ನಾಯ್ಕ, ಶಫಿ ಖಾನ್, ಎಂ.ಎನ್.ಭಟ್ಟ ಇತರರಿದ್ದರು.

Comments


Top Stories

bottom of page