ಡಿ.೨ರಿಂದ ಶಿರಸಿ- ಕುಮಟಾ ರಸ್ತೆ ಸಂಚಾರ ಬಂದ್
- Ananthamurthy m Hegde
- Nov 28, 2024
- 1 min read
ಶಿರಸಿ: ಡಿಸೆಂಬರ್ 2 ರಿಂದ ಶಿರಸಿ-ಕುಮಟಾ ರಸ್ತೆ ಬಂದ್ ಮಾಡಲು ಆದೇಶ ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ದಾಪುರ ಎನ್ಎಚ್ 766 E ಮೂಲಕ ಲಘು ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಯಲ್ಲಾಪುರ ಎನ್ಎಚ್ 63 ಮೂಲಕ ಹಾಗೂ ಸಿದ್ದಾಪುರ-ಮಾವಿನಗುಂಡಿ ರಸ್ತೆ ಮೂಲಕ ಎಲ್ಲಾ ರೀತಿ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಬದಲಿ ಮಾರ್ಗದಲ್ಲಿ ಸಂಚರಿಸಿ, ಸಹಕರಿಸಲು ಪೋಲೀಸ್ ವರಿಷ್ಠಾಧಿಕಾರಿ ಪ್ರಕಟಣೆಯಲ್ಲಿ ಕೋರಿದೆ.
Comentários