top of page

ಡಿ .೨೪ಕ್ಕೆ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ

  • Writer: Ananthamurthy m Hegde
    Ananthamurthy m Hegde
  • Dec 7, 2024
  • 1 min read


ಸಿದ್ದಾಪುರ: ತಾಲೂಕಿನ ಗೋಳಗೋಡಿನಲ್ಲಿ ಡಿಸೆಂಬರ್ 24 ರಂದು ಎರಡನೇ ವರ್ಷದ ರಾಜ್ಯಮಟ್ಟದ ಹೊನಲು ಬೆಳಕಿನ ಪ್ರೋ ಕಬ್ಬಡ್ಡಿ ಪಂದ್ಯಾವಳಿ ನಡೆಯಲಿದೆ ಎಂದು ಬಂಗಾರಪ್ಪ ಅಭಿಮಾನಿ ಬಳಗದ ಅಧ್ಯಕ್ಷ ಗಂಗಾಧರ ನಾಯ್ಕ ಗೋಳಗೋಡ ತಿಳಿಸಿದರು.

ಬಂಗಾರಪ್ಪ ಅಭಿಮಾನಿ ಬಳಗ ಗೋಳಗೋಡ ಹಾಗೂ ಊರ ನಾಗರಿಕರ ಸಂಯುಕ್ತಾಶ್ರಯದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.‌ ಬಂಗಾರಪ್ಪ ಸ್ಮರಣಾರ್ಥ ಪಂದ್ಯಾವಳಿ ನಡೆಯಲಿದೆ ಎಂದರು.

ಗೋಳಗೋಡಿನ ಈಶ್ವರ ದೇವಸ್ಥಾನದ ಮೈದಾನದಲ್ಲಿ ಅದ್ದೂರಿಯಾಗಿ ನಡೆಯುವ ಪಂದ್ಯಾವಳಿಯಲ್ಲಿ ಇದೇ ಮೊದಲ ಬಾರಿಗೆ ಪ್ರೇಕ್ಷಕರ ಗ್ಯಾಲರಿ ವ್ಯವಸ್ಥೆ ಮಾಡಲಾಗುವುದು. ರಾಜ್ಯದ ಹೆಸರಾಂತ ಕಬ್ಬಡ್ಡಿ ಆಟಗಾರರನ್ನು ಒಳಗೊಂಡ ಪಂದ್ಯಾವಳಿ ಇದಾಗಿದ್ದು, 8 ಜನ ಪ್ರಮುಖ ಐಕಾನ್ ಸೇರಿ ಪ್ರತಿ ತಂಡದಲ್ಲಿ ಮೂವರು ಐಕಾನ್ ಪ್ಲೇಯರ್ ಒಳಗೊಂಡ 8 ತಂಡಗಳು ಸೆಣಸಲಿವೆ. ಕಬ್ಬಡ್ಡಿ ಅಭಿಮಾನಿಗಳು ಹಾಗೂ ಬಂಗಾರಪ್ಪನವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ವಿನಂತಿಸಿದರು.

Comments


Top Stories

bottom of page