top of page

ತಿಂಗಳು ಕಳೆದರೂ ದುರಸ್ತಿಯಾಗದ ಆಡಳಿತಸೌಧದ ಲಿಫ್ಟ್

  • Writer: Ananthamurthy m Hegde
    Ananthamurthy m Hegde
  • Jan 2
  • 1 min read


ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ಆಡಳಿತ ಸೌಧದ ಲಿಫ್ಟ್ ವ್ಯವಸ್ಥೆ ಕೆಟ್ಟು ಹಲವು ತಿಂಗಳು ಕಳೆದರೂ ದುರಸ್ತಿ ಮಾಡಿಸುವ ಯಾವ ಲಕ್ಷಣವೂ ಕಂಡು ಬರುತ್ತಿಲ್ಲ. ಹೀಗಾಗಿ ಪ್ರತಿದಿನ ನೂರಕ್ಕೂ ಹೆಚ್ಚು ಜನ ಮೆಟ್ಟಿಲು ಹತ್ತಿಳಿಯುವ ಕಷ್ಟದಿಂದ ಸಾರ್ವಜನಿಕರು ಹಿಡಿ ಶಾಪ ಹಾಕುವಂತಾಗಿದೆ.ಆಡಳಿತ ಸೌಧದಲ್ಲಿ ತಹಶೀಲ್ದಾರ್ ಕಚೇರಿ, ಸಹಾಯಕ ಕಮಿಷನರ್ ಕಚೇರಿ, ಸರ್ವೇ ಕಚೇರಿ,ಆಹಾರ ವಿಭಾಗ ಹೀಗೆ ಹಲವು ಇಲಾಖೆಗೆ ಸಂಬಂಧಿಸಿದ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ.ಹಳೆ ಕಚೇರಿಯಿಂದ ಹೊಸ ಕಚೇರಿಗೆ ಸ್ಥಳಾಂತರಗೊಂಡಿದ್ದು ತನ್ನ ಸಾಮರ್ಥ್ಯ ಮೀರಿ ಲಿಫ್ಟ್ ಕೆಲಸ ಮಾಡಿವೆ.ಹೀಗಾಗಿ ಕಚೇರಿಯ ಸ್ಥಳಾಂತರ ೦ ಮಾಡುವಾಗ ಲಿಫ್ಟ್ ಮೇಲೆ ಪಿಠೋಪಕರಣಗಳು ಹಾಗೂ ದಾಖಲಾತಿಗಳನ್ನು ಈ ಲಿಫ್ಟ್ ಮೇಲೆ ಮೂರನೇ ಮಹಡಿಯವರೆಗೂ ಸಾಗಿಸಲಾಗಿದೆ. ಹೀಗಾಗಿ ಲಿಫ್ಟ್ ಹಾಳಾಗಿದ್ದು ಸಾರ್ವಜನಿಕರು ಅಂಗವಿಕಲರು ವಯೋವೃದ್ದರೂ ಮೆಟ್ಟಿಲಿನ ಮೇಲೆ ಹೋಗಬೇಕಾಗಿದೆ. ಸಾರ್ವಜನಿಕರು ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ರಿಪೇರಿ ಮಾಡಿಸುವರೆ ಕಾದು ನೋಡಬೇಕಾಗಿದೆ.

Comments


Top Stories

bottom of page