ತಾಲೂಕು ಆಸ್ಪತ್ರೆ ಎದುರು ಪ್ರತಿಭಟನೆ : ಶಾಸಕ ಭೀಮಣ್ಣ ಗರಂ
- Ananthamurthy m Hegde
- Nov 10, 2024
- 1 min read
ಸಿದ್ದಾಪುರ: ತಾಲೂಕು ಸರ್ಕಾರಿ ಆಸ್ಪತ್ರೆ ಎದುರು ನಡೆದ ಪ್ರತಿಭಟನೆ ಕುರಿತಂತೆ ಶಿರಸಿ ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ್ ಸುದ್ದಿಗೋಷ್ಠಿ ನಡೆಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹೆರಿಗೆಗೆ ಬಂದ ಮಹಿಳೆ ಸಿಜಿರಿಯನ್ ನಂತರ ಅರೋಗ್ಯದಲ್ಲಿ ಉಂಟಾದ ಏರುಪೇರು
ಮಹಿಳೆ ಮೃತಪಡಲು ವೈದ್ಯರ ನಿರ್ಲಕ್ಷ ಕಾರಣ ಸಾರ್ವಜನಿಕರ ಆರೋಪವನ್ನು ಶಾಸಕ ಭೀಮಣ್ಣ ಖಂಡಿಸಿದ್ದಾರೆ. ಈಗ ಪ್ರತಿಭಟನೆ ಮಾಡಿದಂತೆ ಮಂಗನ ಖಾಯಿಲೆಯಿಂದ ಮೃತಪಟ್ಟಾಗ ಯಾಕೆ ಮಾಡಲಿಲ್ಲ, ಅತಿವೃಷ್ಟಿಯಿಂದ ಮನೆಗಳು ಬಿದ್ದಾಗ ಪ್ರತಿಭಟನೆ ಏಕೆ ಮಾಡಲಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ವೈದ್ಯರ ವಿರುದ್ಧ ಪ್ರತಿಭಟನೆ ಮಾಡುವ ಬದಲು ಕುಳಿತು ಚರ್ಚೆ ಮಾಡಬಹುದಿತ್ತು. ಹೆಣದ ಎದುರು ರಾಜಕೀಯ ಮಾಡುವುದು ಸರಿಯಲ್ಲ. ಚುನಾವಣೆ ಬಂದಾಗ ರಾಜಕೀಯ ಮಾಡೋಣ. ಪ್ರತಿಭಟನೆ ನೋಡಿ ಈಗಿರುವ ವೈದ್ಯರು ಕರ್ತವ್ಯ ನಿರ್ವಹಿಸಲು ಹಿಂಜರಿಯುತ್ತಿದ್ದಾರೆ. ಪರೇಶ್ ಮೇಸ್ತ ಸಾವಿನ ಕಿಚ್ಚನ್ನು ಇಡೀ ಕರಾವಳಿಯಲ್ಲಿ ಹಚ್ಚಿ ಗಲಾಟೆ ಮಾಡಿದವರಿಗೆ ಗಲಾಟೆ ಚಟ ಇನ್ನೂ ಬಿಟ್ಟಿಲ್ಲ ಎಂದು ಅವರು ಕಿಡಿ ಕಾರಿದರು.














Comments