ದೇವರ ಹಣದ ಮೇಲೂ ಬಿತ್ತಾ ಅಧಿಕಾರಿಗಳ ಕಣ್ಣು?
- Ananthamurthy m Hegde
- Jan 1
- 1 min read

ಕಳ್ಳಕಾಕರು ಯಾರೂ ಇಲ್ಲದಿದ್ದಾಗ ರಾತ್ರಿ ಹೊತ್ತಲ್ಲಿ ದೇವರ ಹುಂಡಿಗೆ ಕನ್ನ ಹಾಕೋದನ್ನು ನೋಡಿರುತ್ತೀರಿ ಆದರೆ, ಹಗಲು ಹೊತ್ತಲ್ಲೇ ಅರಣ್ಯ ಅಧಿಕಾರಿಗಳು ದೇವರ ಮುಂದೆ ಕಾಣಿಕೆ ಹಾಕಿರುವ ಹಣವನ್ನು ತೆಗೆದುಕೊಳ್ಳುತ್ತಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಶಿವಮೊಗ್ಗದ ಕೊಡಚಾದ್ರಿಯ ಸರ್ವಜ್ಞ ಪೀಠದಲ್ಲಿ ದೇವರ ವಿಗ್ರಹದ ಮುಂದೆ ಭಕ್ತರು ಹಾಕುವ ಹಣವನ್ನು ಕೊಡಚಾದ್ರಿಯಲ್ಲಿ ವೈಲ್ಡ್ ಲೈಫ್ ಅರಣ್ಯ ಅಧಿಕಾರಿಗಳು ತೆಗೆದುಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆರೋಪ ಹೊತ್ತಿರುವ ಆನಂದ್ ಬಳಿಗಾರ್ ಅವರು ಕೊಲ್ಲೂರು ವೈಲ್ಡ್ ಲೈಫ್ ವ್ಯಾಪ್ತಿಗೆ ಡೆಪ್ಯೂಟೇಶನ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಣ ಲೆಕ್ಕ ಹಾಕಿ ತೆಗೆದುಕೊಳ್ಳುತ್ತಿರುವ ದೃಶ್ಯ ಸೆರೆಯಾಗಿದೆ. ಇದೇ ರೀತಿ ಅಲ್ಲಿನ ಎಲ್ಲಾ ಸಿಬ್ಬಂದಿಗಳು ಮಾಡುತ್ತಿದ್ದಾರೆ ಎಂದು ಸ್ಥಳೀಯರ ಆರೋಪ ಮಾಡಿದ್ದಾರೆ.















Comments