top of page

ನ.17 ರಂದು 'ಪಂಪ ಕಂಡ ಭಾರತ' ವಿಷಯದ ಮೇಲೆ ಬನವಾಸಿಯಲ್ಲಿ ರಾಜ್ಯ ಸಾಹಿತ್ಯ ಗೋಷ್ಠಿ

  • Writer: Ananthamurthy m Hegde
    Ananthamurthy m Hegde
  • Nov 15, 2024
  • 1 min read

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ವತಿಯಿಂದ 'ಪಂಪ ಕಂಡ ಭಾರತ' ವಿಷಯದ ಮೇಲೆ ರಾಜ್ಯ ಸಾಹಿತ್ಯ ಗೋಷ್ಠಿಯನ್ನು ಬನವಾಸಿಯ ವನವಾಸಿಕ ಯಾತ್ರಿ ನಿವಾಸದಲ್ಲಿ ನ.17 ರಂದು ಹಮ್ಮಿಕೊಳ್ಳಲಾಗಿದೆ.

ree

ಈ ಕುರಿತು ಪರಿಷದ್ ರಾಜ್ಯ ಪ್ರಧಾನ ಕಾರ್ಯದರ್ಶಿ

ರಘುನಂದನ್ ಭಟ್ ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ, ಪಂಪ ಕಂಡ ಭಾರತವನ್ನು ಸಮಗ್ರವಾಗಿ ವಿಶ್ಲೇಷಣೆ ಮಾಡಲು ಒಂದು ದಿನದ‌ ಸಾಹಿತ್ಯ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ ೯.೪೫ ಕ್ಕೆ ಕಾರ್ಯಕ್ರಮ ಉದ್ಘಾಟನೆಯನ್ನು ಪರಿಷದ್ ಉಪಾಧ್ಯಕ್ಷ ಎಸ್.ಜಿ.ಕೋಟಿ ನಡೆಸಲಿದ್ದು, ಕನ್ಮಡ‌ ವಿದ್ವಾಂಸ ಡಾ.ವಿಷ್ಣು ಭಟ್ ಪಾದೇಕಲ್ಲು ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.



ಪರಿಷದ್ ಜಿಲ್ಲಾಧ್ಯಕ್ಷ ಗಂಗಾಧರ‌ ಕೊಳಗಿ‌ ಉಪಸ್ಥಿತಿ ಇರಲಿದ್ದು, ಪುಟ್ಟು ಕುಲಕರ್ಣಿಯವರ ಶ್ರೀ ಅರವಿಂದ ಸಾವಿತ್ರಿ ಪುಸ್ತಕ ಬಿಡಗಡೆಯಾಗಲಿದೆ. ಬಳಿಕ ೧೧.೩೦ ರಿಂದ ಕರ್ಣಾರ್ಜುನ ಭಾಗವಾಗಿ ವಿಕ್ರಮಾರ್ಜುನ ವಿಜಯದ ಕರ್ಣ ವಿಷಯದ ಮೇಲೆ ಕನ್ನಡ ಪ್ರಾಧ್ಯಾಪಕ ಡಾ.ಜಗದೀಶ ತುರಗನೂರು, ಅರಸಿಕೇರಿ ಅರ್ಜುನನಾದ ಬಗೆ ವಿಷಯದ ಮೇಲೆ ಸಾಹಿತ್ಯ ವಿದ್ವಾಂಸ ಡಾ.ಶ್ರೀಧರ ಹೆಗಡೆ ಮಾತನಾಡಲಿದ್ದಾರೆ. ಪ್ರಾಧ್ಯಾಪಕ ರಾಘವೇಂದ್ರ ಸಂಪ ಅವಲೋಕ ಮಾಡಲಿದ್ದಾರೆ ಎಂದರು.


ಅವಧಿ ಎರಡರ ಭಾಗವಾಗಿ ಮಧ್ಯಾಹ್ನ ೨.೩೦ ರಿಂದ ಕೃಷ್ಣಾರ್ಜುನ ವಿಷಯವಾಗಿ ಪಂಪನ ನಾಯಕನಾಗಿ ಅರ್ಜುನ ವಿಷಯದ ಮೇಲೆ ಪ್ರೊ.ಟಿ.ಜಿ.ಭಟ್ ಹಾಸಣಗಿ, ಪಂಪನ ಕೃಷ್ಣ ವಿಷಯದ ಮೇಲೆ ವಿದ್ವಾಂಸ ಡಾ.ಪುಟ್ಟು ಕುಲಕರ್ಣಿ ಮಾತನಾಡಲಿದ್ದು, ಸಂಸ್ಕೃತ ವಿದ್ವಾಂಸ ಲೋಹಿತಾಶ್ವ ತೀರ್ಥಹಳ್ಳಿ ಅವಲೋಕನ ಮಾಡಲಿದ್ದಾರೆ ಎಂದ ಅವರು, ಸಂಜೆ ೪ ರಿಂದ ಸಮಾರೋಪ ನಡೆಯಲಿದ್ದು, ಸಂಸ್ಕೃತ ವಿದ್ವಾಂಸ ಡಾ.ಟಿ.ಎನ್.ಪ್ರಭಾಕರ ಮೈಸೂರು ಸಮಾರೋಪ ಮಾತುಗಳನ್ನಾಡಲಿದ್ದಾರೆ. ಪರಿಷದ್ ಕಾರ್ಯಕಾರಿಣಿ ಸದಸ್ಯ ಜಗದೀಶ ಭಂಡಾರಿ ಉಪಸ್ಥಿತಿ ಇರಲಿದೆ ಎಂದರು.


ಈ ವೇಳೆ ಪರಿಷದ್ ಪ್ರಮುಖರಾದ ಭಾರತೀ ಮಿರ್ಜಿ, ಭಾನುರಾಜ ಮಂಗಳೂರು, ಕೃಷ್ಣಮೂರ್ತಿ ಪದಕಿ, ಜಗದೀಶ ಭಂಡಾರಿ, ಗಂಗಾಧರ ಕೊಳಗಿ ಇದ್ದರು.‌

Comments


Top Stories

bottom of page