ನಾಣಿಕಟ್ಟಾ ಕಾಲೇಜಿನಲ್ಲಿ ಪೋಕ್ಸೋ ಕಾಯಿದೆ ಅರಿವು ಕಾರ್ಯಕ್ರಮ
- Ananthamurthy m Hegde
- Nov 8, 2024
- 1 min read
ಸಿದ್ದಾಪುರ: ತಾಲೂಕಿನ ನಾಣಿಕಟ್ಟಾದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರವಾರದ ಸಹಯೋಗದಲ್ಲಿ "ಪೋಕ್ಸೊ ಕಾಯಿದೆ ಅರಿವು" ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮಕ್ಕಳ ರಕ್ಷಣಾ ಅಧಿಕಾರಿ ಮಹೇಶ. ಜಿ. ಪೋಕ್ಸೊ ಕಾಯಿದೆಯ ವಿಶೇಷತೆ, ವಿದ್ಯಾರ್ಥಿಗಳು ಅರಿತುಕೊಳ್ಳಬೇಕಾದ ಅಂಶಗಳು ಮತ್ತು ವಹಿಸಬೇಕಾದ ಎಚ್ಛರಿಕೆಗಳ ಬಗ್ಗೆ ವಿವರಿಸಿದರು. ೨೦೧೨ರಲ್ಲಿ ಜಾರಿಗೆ ಬಂದ ಕಾಯಿದೆ ೨೦೧೯ರಲ್ಲಿ ತಿದ್ದುಪಡಿಗೊಂಡಿರುತ್ತದೆ. ೧೮ ವರ್ಷಗಳವರೆಗಿನ ಎಲ್ಲಾ ಮಕ್ಕಳನ್ನು ಶೋಷಣೆಯಿಂದ ಅದರಲ್ಲೂ ಲೈಂಗಿಕ ಶೋಷಣೆಯಿಂದ ರಕ್ಷಣೆ ಮಾಡುವುದು ಈ ಕಾಯಿದೆಯ ಉದ್ದೇಶವಾಗಿದೆ. ಮಕ್ಕಳಿಗೆ ಯಾವುದೇ ತೊಂದರೆಯಾದರೂ ೧೦೯೮ಗೆ ಕರೆ ಮಾಡಿ ರಕ್ಷಣೆ ಪಡೆಯಬಹುದಾಗಿದೆ ಎಂದರು. ಕ್ಷೇತ್ರಾಧಿಕಾರಿ ವಿರಾಜ್ ನಾಗರೇಕರ್ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಂ.ಕೆ.ನಾಯ್ಕ ಹೊಸಳ್ಳಿ ಮಾತನಾಡಿ ವಿದ್ಯಾರ್ಥಿಗಳು ಅವರಿಗೆ ಲಭ್ಯವಿರುವ ರಕ್ಷಣಾ ಕಾನೂನುಗಳನ್ನು ಅರಿತುಕೊಳ್ಳಬೇಕು ಮತ್ತು ಪಾಲಿಸಬೇಕು ಎಂದರು. ಉಪನ್ಯಾಸಕರಾದ ಎಂ.ಎA.ಭಟ್ಟ ಸ್ವಾಗತಿಸಿ ನಿರೂಪಿಸಿದರು. ಎಸ್.ಎಚ್.ನಾಯ್ಕ ವಂದಿಸಿದರು.














Comments