ನಿಂತಿದ್ದ ಲಾರಿಯಲ್ಲಿ ಚಾಲಕ ಮೃತ
- Ananthamurthy m Hegde
- Nov 23, 2024
- 1 min read
ಯಲ್ಲಾಪುರ: ಲಾರಿ ಚಾಲಕನೊಬ್ಬ ಲಾರಿಯಲ್ಲೇ ಮೃತಪಟ್ಟ ಘಟನೆ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ ಶುಕ್ರವಾರ ನಡೆದಿದೆ.
ತಮಿಳುನಾಡಿನ ಅಣ್ಣಾದೊರೈ (50) ಮೃತ ಚಾಲಕ. ಪಟ್ಟಣದ ಸಂಕಲ್ಪ ಕ್ರಾಸ್ ಬಳಿ ಹೋಗುವಾಗ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿ ಚಾಲಕ ಲಾರಿಯನ್ನು ನಿಲ್ಲಿಸಿದ್ದಾನೆ. ಅದೇ ವೇಳೆ ರೌಂಡ್ಸ್ ನಲ್ಲಿದ್ದ ಪೊಲೀಸರು ಲಾರಿಯನ್ನು ಬದಿಗೆ ನಿಲ್ಲಿಸುವಂತೆ ಹೇಳಿದ್ದಾರೆ. ಆಗ ಚಾಲಕ ಮಾತನಾಡದೇ ಇರುವುದನ್ನು ನೋಡಿ, ಪರಿಶೀಲಿಸಿದಾಗ ಮೃತಪಟ್ಟಿರುವುದು ತಿಳಿದು ಬಂದಿದೆ.
ಲಾರಿಯಲ್ಲಿ ಚಾಲಕನೊಬ್ಬನೇ ಇದ್ದು, ಹೃದಯಾಘಾತದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.












Comments