ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ಮಾಡಿದ ಡಾಲಿ ಧನಂಜಯ
- Ananthamurthy m Hegde
- Nov 25, 2024
- 1 min read
ಭಟ್ಕಳ: ಮುರುಡೇಶ್ವರದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ವಿಶ್ವ ಮೀನುಗಾರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ ಶನಿವಾರ ಆಗಮಿಸಿದ ಡಾಲಿ ಧನ ಧನಂಜಯ ನೇತ್ರಾಣಿ ದ್ವೀಪದಲ್ಲಿ ಸ್ಕೂಬ್ ಡೈವಿಂಗ್ ಮಾಡುವ ಮೂಲಕ ಸಮುದ್ರದಾಳದ ಸೌಂದರ್ಯವನ್ನು ಸವಿದಿದ್ದಾರೆ.
ಶನಿವಾರ ವಿಶ್ವ ಮೀನುಗಾರಿಕಾ ದಿನಾಚರಣೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಕಾರ್ಯಕ್ರಮಕ್ಕೆ ಪಾಲ್ಗೊಳ್ಳುವ ಪೂರ್ವದಲ್ಲಿ ಆಗಮಿಸುವ ಮೊದಲು ಅಕ್ವಾರೈಡ್ ಸಂಸ್ಥೆಯ ಬೋಟ್‌ನಲ್ಲಿ ನೇತ್ರಾಣಿ ದ್ವೀಪಕ್ಕೆ ತೆರಳಿದ ನಟ ಡಾಲಿ ಧನ ಧನಂಜಯ ಸುಮಾರು ಒಂದು ಗಂಟೆಗಳ ಕಾಲ ಸ್ಕೂಬ್ ಡೈವಿಂಗ್ ಮಾಡುವ ಮೂಲಕ ಸಮುದ್ರದಾಳದ ಸೌಂದರ್ಯವನ್ನು ಸವಿದಿದ್ದಾರೆ.
ಸ್ಕೂಬಾ ಡೈವಿಂಗ್ ಮಾಡಿದ ಬಳಿಕ ತಮ್ಮ ಅನುಭವ ಹಂಚಿಕೊಂಡ ಡಾಲಿ ಈ ಅನುಭವ ಸುಂದರವಾಗಿತ್ತು ಸೂಪರ್ ಆಗಿದೆ ಮತ್ತೆ ಬರುತ್ತೇನೆ. ತುಂಬಾ ಆಳಕ್ಕೆ ಹೋಗಿದ್ದೇವೆ.ಒಂದು ಗಂಟೆಗಳ ಕಾಲ ಸ್ಕೂಬ್ ಡೈವಿಂಗ್ ಮಾಡಬಹುದೆಂದು ಹೇಳಿಕೊಂಡಿದ್ದಾರೆ.
Comments