ನೇತ್ರಾವತಿ ನದಿಯಲ್ಲಿ ದನದ ತ್ಯಾಜ್ಯ ಪತ್ತೆ !
- Ananthamurthy m Hegde
- Dec 21, 2024
- 1 min read

ದಕ್ಷಿಣ ಕನ್ನಡ: ಕರ್ನಾಟಕದ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಧರ್ಮಸ್ಥಳದ ಮಂಜುನಾಥನ ಸನ್ನಿಧಿಯನ್ನು ಪವಿತ್ರ ತೀರ್ಥಸ್ನಾನವನ್ನು ಅಪವಿತ್ರ ಮಾಡಲು ಕೆಲವರು ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಹಲವು ಭಕ್ತರಲ್ಲಿಆತಂಕ ಮೂಡಿಸಿದೆ. ಧರ್ಮಸ್ಥಳದ ಮಂಜುನಾಥನ ಸನ್ನಿಧಿಗೆ ತೆರಳುವ ಭಕ್ತರು ನೇತ್ರಾವತಿ ನದಿಯಲ್ಲಿ ಪವಿತ್ರ ಸ್ನಾನ ಮಾಡಿ ನಂದರ ದೇವರ ದರ್ಶನ ಪಡೆಯುವುದು ವಾಡಿಕೆ. ಆದರೆ ಸಾವಿರಾರು ಭಕ್ತರು ಸ್ನಾನ ಮಾಡುವ ನೇತ್ರಾವತಿ ನದಿಯ ಅಪವಿತ್ರಕ್ಕೆ ಹುನ್ನಾರ ನಡೆಯುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.
ಸ್ನಾನಘಟ್ಟ ಅಪವಿತ್ರ ಗೊಳಿಸಲು ಹುನ್ನಾರ?
ಕೆಲವರು ಧರ್ಮಸ್ಥಳ ಸ್ನಾನಘಟ್ಟವನ್ನು ಅಪವಿತ್ರ ಗೊಳಿಸಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಯಾಕೆಂದರೆ ಮೃತ್ಯುಂಜಯ ನದಿಯಲ್ಲಿ ದನದ ಚರ್ಮ, ತಲೆ ಪತ್ತೆಯಾಗಿದೆ. ಯಾರೋ ಅಪರಿಚಿತರು ದನದ ಚರ್ಮ ಮತ್ತು ತಲೆಯನ್ನು ಗೋಣಿ ಚೀಲದಲ್ಲಿ ತುಂಬಿ ಮೃತ್ಯುಂಜಯ ನದಿಗೆ ಎಸೆದಿದ್ದಾರೆ. ಈ ಮೃತ್ಯುಂಜಯ ನದಿಯು ನೇತ್ರಾವತಿ ನದಿಗೆ ಬಂದು ಸೇರುತ್ತದೆ.
ಹಿಂದೂ ಪರ ಸಂಘಟನೆಗಳಿಂದ ಆಕ್ರೋಶ
ಇನ್ನು ದನದ ಚರ್ಮ ಮತ್ತು ತಲೆ ಯನ್ನು ಗಮನಿಸಿದ ಜನರು, ಧರ್ಮಸ್ಥಳದಲ್ಲಿ ತೀರ್ಥ ಸ್ನಾನ ಮಾಡುವ ಭಕ್ತರು ಮತ್ತು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಯತ್ನಿಸುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ನದಿಯನ್ನು ಅಪವಿತ್ರಗೊಳಿಸಲು ಕೃತ್ಯ ನಡೆಸಿದ್ದಾರೆ ಎಂದು ಹಿಂದೂ ಪರ ಸಂಘಟನೆ ಆರೋಪ ಮಾಡಿದೆ. ಅಲ್ಲದೆ, ಪೊಲೀಸರು ಈ ಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಆರೋಪ ಮಾಡಲಾಗಿದೆ.
ದೂರು ಕೊಟ್ಟರು ಕ್ರಮ ಕೈಗೊಂಡಿಲ್ಲ
ವರ್ಷದಲ್ಲಿ ಲಕ್ಷಾಂತರ ಭಕ್ತರು ಪವಿತ್ರ ಸ್ನಾನ ಮಾಡುವ ನದಿಯ ನೀರನ್ನು ಉದ್ದೇಶಪೂರ್ವಕವಾಗಿಯೇ ಅಪವಿತ್ರಗೊಳಿಸುವ ಪ್ರಯತ್ನ ನಡೆಯುತ್ತಿದೆ. ಈ ನದಿ ಪಕ್ಕದಲ್ಲಿ ಹಲವು ಅಯ್ಯಪ್ಪ ಮಾಲಾಧಾರಿಗಳು ಬಿಡಾರವನ್ನು ಹಾಕಿದ್ದಾರೆ. ಆಹಾರ ಮತ್ತು ನಿತ್ಯ ಬಳಕೆಗೆ ಅದೇ ನದಿಯ ನೀರನ್ನು ಬಳಸುತ್ತಿದ್ದಾರೆ. ದನದ ತ್ಯಾಜ್ಯವನ್ನು ಎಸೆದು ಅಪವಿತ್ರಮಾಡಲು ಯತ್ನಿಸುತ್ತಿದ್ದಾರೆ. ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಆರೋಪ ಮಾಡಿದ್ದು, ಈ ಬಗ್ಗೆ ಧರ್ಮಸ್ಥಳ ಠಾಣೆಗೆ ದೂರು ಸಹ ನೀಡಿದೆ. ಆದರೆ, ಪೊಲೀಸರು ಯಾರನ್ನೂ ಬಂಧಿಸಿಲ್ಲ ಎಂದು ಹೇಳಲಾಗಿದೆ .















Comments