ನ್ಯೂ ಇಯರ್ ಸೆಲೆಬ್ರೇಷನ್‌ಗಾಗಿ 32 ಫ್ಲೈ ಓವರ್‌ಗಳು ಬಂದ್
- Ananthamurthy m Hegde
- Dec 31, 2024
- 1 min read

ನ್ಯೂ ಇಯರ್ ಸೆಲೆಬ್ರೇಷನ್‌ಗೆ ಎಲ್ಲರೂ ಸಜ್ಜಾಗಿದ್ದಾರೆ. ಅದರಲ್ಲಿಯೂ ಬೆಂಗಳೂರಿನಲ್ಲಿ ಸೆಲೆಬ್ರೇಷನ್‌ಗೆ ತಯಾರಿಯೂ ಜೋರಾಗಿದೆ. ಎಂಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆ ಕಲರ್‌ಫುಲ್ ಲೈಟಿಂಗ್ಸ್‌ಗಳಿಂದ ಝಗಮಗಿಸುತ್ತಿದೆ. ಇಂದು ರಾತ್ರಿ 12 ಗಂಟೆವರೆಗೆ ಎಂಜಿ ರೋಡ್‌ನಲ್ಲಿ ಸಂಭ್ರಮಾಚರಣೆಗೆ ಅವಕಾಶ ನೀಡಲಾಗಿದೆ. ಬೆಂಗಳೂರು ಮಾತ್ರವಲ್ಲದೇ ನಾಡಿನ ಮೂಲೆ ಮೂಲೆಯಲ್ಲೂ ಹೊಸ ವರ್ಷದ ಸಂಭ್ರಮಾಚರಣೆ ಜೋರಾಗಿದೆ. ಈ ಮಧ್ಯೆ ಬೆಂಗಳೂರಿನಲ್ಲು ಮುನ್ನೆಚ್ಚರಿಕಾ ಕ್ರಮವಾಗಿ 32 ಫ್ಲೈ ಓವರ್ ಬಂದ್ ಇರಲಿದೆ. ಮುಂಜಾಗೃತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇಂದು ರಾತ್ರಿ 9 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆಯವರೆಗೂ ಈ 32 ಫ್ಲೈ ಓವರ್‌ಗಳು ಕ್ಲೋಸ್ ಇರಲಿದೆ. ಈ ಕಾರಣ ವಾಹನ ಸವಾರರು ಸರ್ವೀಸ್ ರಸ್ತೆಯನ್ನೇ ಬಳಸಬೇಕು ಎನ್ನಲಾಗಿದೆ.
ಹೊಸ ವರ್ಷ ಆರಂಭಕ್ಕೂ ಮುನ್ನವೇ ರಾಜ್ಯದಲ್ಲಿ ದಾಖಲೆ ಬರೆದ ಮದ್ಯ ಮಾರಾಟ!
ಬೆಂಗಳೂರು ಮಾತ್ರವಲ್ಲದೇ ನಾಡಿನ ಮೂಲೆ ಮೂಲೆಯಲ್ಲೂ ಹೊಸ ವರ್ಷದ ಸಂಭ್ರಮಾಚರಣೆ ಜೋರಾಗಿದ್ದು, ಇದರ ನಡುವೆಯೇ ಕರ್ನಾಟಕದಲ್ಲಿ ದಾಖಲೆ ಪ್ರಮಾಣದಲ್ಲಿ ಮದ್ಯ ಮಾರಾಟ ಆಗಿದೆ. ಡಿಸೆಂಬರ್ 28ರ ಶನಿವಾರ ಕರ್ನಾಟಕದಾದ್ಯಂತ 408.53 ಕೋಟಿ ರೂಪಾಯಿ ಮದ್ಯ ಮಾರಾಟವಾಗಿದೆ ಎಂದು ಫೆಡರೇಶನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಬಿ ಗೋವಿಂದರಾಜು ತಿಳಿಸಿದ್ದಾರೆ .















Comments