top of page

ನ.೩೦ಕ್ಕೆ ನೆಮ್ಮದಿ ರಂಗಧಾಮದಲ್ಲಿ ಸಂಗೀತ ಕಾರ್ಯಕ್ರಮ

  • Writer: Ananthamurthy m Hegde
    Ananthamurthy m Hegde
  • Nov 28, 2024
  • 1 min read

ಶಿರಸಿ: ಅರುಣೋದಯ ಕಲಾ ನಿಕೇತನ, ಶಾಸ್ತ್ರೀಯ ಸಂಗೀತ ವಿದ್ಯಾಲಯ ಶಿರಸಿ, ಕಲಾಸಂವಹನ ಟ್ರಸ್ಟ್ ಧಾರವಾಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ಸಂಗೀತ ವಿದ್ವಾನ್ ಮಹಾರುದ್ರಪ್ಪ ವಿ ಪೂಜಾರ ಸ್ಮರಣಾರ್ಥ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಸಂಜೀವ ಪೋತದಾರ ತಿಳಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ನೆಮ್ಮದಿ ರಂಗಧಾಮದಲ್ಲಿ ನ.30ರಂದು ಸಂಜೆ 4.30ಕ್ಕೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ನೇತ್ರತಜ್ಞ ಡಾ.ಶಿವರಾಮ ಕೆ.ವಿ ಉದ್ಘಾಟಿಸಲಿದ್ದು, ಶಾಸಕ ಭೀಮಣ್ಣ ನಾಯ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಪಂಡಿತ ಕಲಾಚಂದ್ರ ಪ್ರಶಸ್ತಿಯನ್ನು ಪಂಡಿತ ಡಾ‌. ಸತೀಶ ಹಂಪಿಹೋಳಿ ಅವರಿಗೆ ನೀಡಿ ಗೌರವಿಸಲಾಗುವುದು‌.

ಸಂಗೀತ ಕಾರ್ಯಕ್ರಮದಲ್ಲಿ ಸಂತೂರ್ ವಾದನದಲ್ಲಿ ಪಂಡಿತ್ ಅಭಯ್ ಸುಪೂರಿ ದೆಹಲಿ ಭಾಗವಹಿಸಲಿದ್ದು ತಬಲಾದಲ್ಲಿ ಪಂಡಿತ್ ರಾಜೇಂದ್ರ ನಾಕೋಡ್ ಬೆಂಗಳೂರು ಸಹಕರಿಸಿದ್ದಾರೆ.

ಸರಸ್ವತಿ ಬೋರ್ಗಾವಕರ್ ಸೋಲಾಪುರ್ ಗಾಯನ ಪ್ರಸ್ತುತ ಪಡಿಸಲಿದ್ದು, ಅಂಬರೀಷ್ ಶೀಲವಂತ ಬೀದರ್ ತಬಲಾದಲ್ಲಿ ಸಾಥ್ ನೀಡಿದರೆ ಭರತ್ ಹೆಗಡೆ ಹೆಬ್ಬಲಸು ಹಾರ್ಮೋನಿಯಂ ನಲ್ಲಿ ಸಾಥ್ ನೀಡಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಜಗದೀಶ ಭಂಡಾರಿ, ಶಾರದಾ, ರವಿ ಇದ್ದರು.

Comments


Top Stories

bottom of page