ನಮ್ಮ ಧರ್ಮ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಉಳಿಸಿಕೊಳ್ಳಬೇಕು; ಬಿ.ಎಲ್. ಸಂತೋಷ್
- Ananthamurthy m Hegde
- Jun 7
- 2 min read
ಗೋರೆಯಲ್ಲಿರುವ ಕೆನರಾ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜಿನ ಸ್ಥಾಪಕ ಅಧ್ಯಕ್ಷ ಜಿ.ಜಿ. ಹೆಗಡೆ ಅವರ ನೇತೃತ್ವದಲ್ಲಿ ಕೆನರಾ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಪ್ರಗತಿ ಪಥ 2025 ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಅಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ರವರು ಭಾಗವಹಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ಬಿ.ಎಲ್. ಸಂತೋಷ್ ರವರು ಮಾತನಾಡಿ ಕಾಲೇಜ್ ವಿದ್ಯಾರ್ಥಿ ಜೀವನದ ಗ್ಯಾಮರಸ್ ಸ್ಥಿತಿ ಎಂದು ಹಾಸ್ಯ ಚಟಾಕಿಯ ಮೂಲಕ ಮಾತು ಆರಂಭಿಸಿ, ಮಸಾಲೆದೋಸೆ ಸಿಗುತ್ತದೆ ಎಂದು ಎನ್.ಸಿ.ಸಿ ಸೇರಿಕೊಂಡಿದ್ದೆ ಎಂದರು. ಪ್ರತಿಭಾನ್ವಿತ ವ್ಯಕ್ತಿಗಳಿಗೆ ಶುಭ ಹಾರೈಸಿ ಮಾತು ಆರಂಭಿಸಿದರು. ನಾವು ನಮ್ಮ ಮನಸ್ಸಿನಲ್ಲಿ ಉಳಿದುಕೊಳ್ಳುವ ಹಂಬಲಕ್ಕೆ ಮೊದಮೊದಲು ಕೆಲವನ್ನು ಆಯ್ಕೆ ಮಾಡಿಕೊಂಡು ನಂತರ ಬದಲಾವಣೆಗೆ ಹೊಂದಿಕೊಳ್ಳುತ್ತಾ ಬರುತ್ತೇವೆ ಎಂದರು. ಸಮಾಜದಲ್ಲಿ ಡೆಲಿಜನ್, ಸಿಟಿಜನ್ ಮತ್ತು ಸನ್ಸ್ ಎಂಡ್ ಡಾಟರ್ಸ್ ಆಫ್ ದ ಸೊಯ್ಲ್ ಎಂಬ ಮೂರು ವರ್ಗವಿರುತ್ತದೆ. ಡೆಲಿಸನ್ ಗಳಿಗೆ ನಾಳೆ ಮತ್ತು ಮುಂದಿನ ಯೋಚನೆ ಇರುವುದಿಲ್ಲ. ಸಿಟಿಜನ್ ಗಳಿಗೆ ನಾಳೆ ಮತ್ತು ಮುಂದಿನ ಅವರ ಬಗೆಗಿನ ಚಿಂತೆ ಮಾತ್ರ ಇರುತ್ತದೆ. ಇನ್ನೊಂದು ವರ್ಗ ಇಂದು ನಾವೆಲ್ಲಾ ಯಾರೆಲ್ಲರ ಬಗ್ಗೆ ಓದುತ್ತಿದ್ದೇವೋ ಆ ವರ್ಗ ಸನ್ಸ್ ಎಂಡ್ ಡಾಟರ್ಸ್ ಆಫ್ ದ ಸಾಯಿಲ್ ವರ್ಗಕ್ಕೆ ಸೇರಿದವರಾಗಿದ್ದಾರೆ ಎಂದರು. 8500 ವರ್ಷಗಳ ಜಗತ್ತಿನ ಅತ್ಯಂತ ಜೀವಂತ ಪ್ರಾಚೀನ ನಗರ ವಾರಣಾಸಿ ಅಥವಾ ಕಾಶಿ ಬಹಳ ಪ್ರಾಚೀನ ಕಾಲದಲ್ಲಿ ಇದ್ದ ಎಷ್ಟೋ ದೇಶಗಳು ಹಿಂದೆ ಇದ್ದವು ಅವುಗಳಲ್ಲಿ ಹಲವು ಇಂದು ಇಲ್ಲ ವಾಸ್ತವವಾಗಿ ಅಲ್ಲಿ ದೇಶ ಇದ್ದರೂ ಹಿಂದಿನದಕ್ಕೂ ಅದಕ್ಕೂ ಸಂಬAಧಿಲ್ಲ ಎನ್ನುವ ಮೂಲಕ ನಮ್ಮ ಧರ್ಮ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಉಳಿಸಿಕೊಳ್ಳಬೇಕೆಂದರು. ಹಿಂದೆ ಆಶ್ರಮ ವ್ಯವಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುವ ಜೊತೆಗೆ ಭಿಕ್ಷೆಸಹ ತರಬೇಕಿತ್ತು ಅದರಿಂದಲೇ ಗುರುಕುಲ ನಡೆಯಬೇಕಿತ್ತು. ಆದರೆ ಇಂದು ನಮ್ಮ ಪರವಾಗಿ ಯಾರೋ ಫೀ ಕಟ್ಟುತ್ತಾರೆ ಎನ್ನುವ ಮೂಲಕ ಬದಲಾದ ವಿದ್ಯಾರ್ಥಿ ಜೀವನದ ಬದಲಾವಣೆಗಳ ಬಗ್ಗೆ ಮಾರ್ಮಿಕವಾಗಿ ಕೆಲ ಕಥೆಗಳ ಮೂಲಕ ಹೇಳಿದರು. ಶ್ರೀರಾಮ ಎಂದೂ ನಡವಳಿಕೆಯ ಗಡಿಗಳನ್ನು ನಾಟಿಲ್ಲ ಅದರಿಂದಲೇ ಅವನನ್ನು ಮರ್ಯಾದಾ ಪುರುಷೋತ್ತಮ ಎಂದು ಕರೆದಿದ್ದಾರೆ. ನಮ್ಮ ಕಾಲದಲ್ಲಿ ಫ್ರೆಂಡ್ ಇದ್ದರು ಆದರೆ ಇಂದು ಬೆಸ್ಟ್ ಫ್ರೆಂಡ್ ಕಾನ್ಸೆಪ್ಟ್ ಆರಂಭವಾಗಿದೆ ನಾವು ನಿಯಮವನ್ನು ಪಾಲಿಸಬೇಕಾಗಿದೆ. ಅದು ಯಾರ ಭಯಕ್ಕೆ ಅಥವಾ ಒತ್ತಡಕ್ಕಾಗಿ ಅಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಕರ ಬಗ್ಗೆ ಗೌರವ ಇದ್ದರೆ ಸಾಕು ಹೆದರಿಕೆ ಬೇಡ ಎಂದರು. ನಾವೆಲ್ಲರೂ ದೇಶಕ್ಕೆ ಮತ್ತು ಸಮಾಜಕ್ಕೆ ಹೆಗಲು ಕೊಡುವ ವ್ಯಕ್ತಿಗಳಾಗಬೇಕಾಗಿದೆ ವಿದ್ಯಾರ್ಥಿ ಜೀವನದ ಒಂದೊAದು ಅಂಕಕ್ಕಾಗಿಯೂ ನೀವು ಸಾರ್ಥಕ ಶ್ರಮ ಪಡುವ ಮೂಲಕ ಜೀವನ ಸಾರ್ಥಕ ಪಡಿಸಿಕೊಳ್ಳಬೇಕಾಗಿದೆ ಎಂದರು. ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿ ಮಾತನಾಡಿ ಗೋರೆಯಂತಹ ಕುಗ್ರಾಮದಲ್ಲಿ ಇಂತಹ ಕಾಲೇಜ್ ಕಟ್ಟಿಸಿ ಡಾ|| ಜಿ.ಜಿ.ಹೆಗಡೆ ರವರು ತಾಲೂಕಿಗೆ ಕೀರ್ತಿ ತಂದಿದ್ದಾರೆ ಎಂದರೆ ತಪ್ಪಾಗಲಾರದು. ಈ ಕಾಲೇಜಿನಲ್ಲಿ ಸಂಸ್ಕಾರಯುತವಾಗಿ ವಿದ್ಯಾರ್ಥಿಗಳಿಗೆ ವಿದ್ಯೆ ನೀಡುತ್ತಿರುವ ಬಗ್ಗೆ ಡಾ|| ಜಿ.ಜಿ.ಹೆಗಡೆ ರವರಿಗೆ ಧನ್ಯವಾದ ಹೇಳುತ್ತೇನೆ ಎನ್ನುವ ಜೊತೆಗೆ ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡಿ ತಮ್ಮ ವಿದ್ಯಾರ್ಥಿಗಳು ಇಲ್ಲಿಯೇ ಉಳಿಯುವಂತೆ ಮಾಡಿಕೊಡುವಂತೆ ಬಿ.ಎಲ್ ಸಂತೋಷಜಿ ರವರಿಗೆ ವಿನಂತಿಸಿದರು.
ಶಾಸಕರಾದ ದಿನಕರ ಶೆಟ್ಟಿ ರವರು ಮಾತನಾಡಿ
ಗೋರೆಯಂತಹ ಕುಗ್ರಾಮದಲ್ಲಿ ಇಂತಹ ಕಾಲೇಜ್ ಕಟ್ಟಿಸಿ ಡಾ|| ಜಿ.ಜಿ.ಹೆಗಡೆ ರವರು ತಾಲೂಕಿಗೆ ಕರ‍್ತಿ ತಂದಿದ್ದಾರೆ ಎಂದರೆ ತಪ್ಪಾಗಲಾರದು. ಈ ಕಾಲೇಜಿನಲ್ಲಿ ಸಂಸ್ಕಾರಯುತವಾಗಿ ವಿದ್ಯರ‍್ಥಿಗಳಿಗೆ ವಿದ್ಯೆ ನೀಡುತ್ತಿರುವ ಬಗ್ಗೆ ಡಾ|| ಜಿ.ಜಿ.ಹೆಗಡೆ ರವರಿಗೆ ಧನ್ಯವಾದ ಹೇಳುತ್ತೇನೆ ಎನ್ನುವ ಜೊತೆಗೆ ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡಿ ತಮ್ಮ ವಿದ್ಯರ‍್ಥಿಗಳು ಇಲ್ಲಿಯೇ ಉಳಿಯುವಂತೆ ಮಾಡಿಕೊಡುವಂತೆ ಬಿ.ಎಲ್ ಸಂತೋಷಜಿ ರವರಿಗೆ ವಿನಂತಿಸಿದರು.















Comments