top of page

ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ತೈವಾನ್ ಕಂಪನಿ ಹೆಸರು

  • Writer: Ananthamurthy m Hegde
    Ananthamurthy m Hegde
  • Dec 10, 2024
  • 1 min read

ree

ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗದ ಬೊಮ್ಮಸಂದ್ರ ನಿಲ್ದಾಣ ನಿರ್ಮಾಣ ಸಹಭಾಗಿತ್ವ ಹಾಗೂ ನಾಮಕರಣದ ವಿಚಾರವಾಗಿ ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್​​ಸಿಎಲ್) ಮತ್ತು ತೈವಾನ್‌ನ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕಂಪನಿ ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸೋಮವಾರ ಒಪ್ಪಂದಕ್ಕೆ ಸಹಿ ಹಾಕಿವೆ. ಇದರಂತೆ, ಹಳದಿ ಮಾರ್ಗದಲ್ಲಿರುವ ಬೊಮ್ಮಸಂದ್ರ ನಿಲ್ದಾಣದ ನಿರ್ಮಾಣದಲ್ಲಿ ಸಹಭಾಗಿತ್ವ ಹಾಗೂ ನಾಮಕರಣದ ಹಕ್ಕುಗಳನ್ನು ಡೆಲ್ಟಾ ಎಲೆಕ್ಟ್ರಾನಿಕ್ಸ್​​ಗೆ ನೀಡಲಾಗುತ್ತದೆ. ಹೀಗಾಗಿ ಬೊಮ್ಮಸಂದ್ರ ನಿಲ್ದಾಣದ ಹೆಸರು ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ನಿಲ್ದಾಣ ಎಂದಾಗಲಿದೆ.

65 ಕೋಟಿ ರೂ. ಒಪ್ಪಂದ

30 ವರ್ಷಗಳ ಅವಧಿಗೆ ನಾಮಕರಣದ ಹಕ್ಕುಗಳನ್ನು ಹೊಂದಲು ಕಂಪನಿಯು ಬಿಎಂಆರ್‌ಸಿಎಲ್‌ಗೆ 65 ಕೋಟಿ ರೂಪಾಯಿಗಳನ್ನು ಪಾವತಿಸಲಿದೆ ಎಂದು ಬಿಎಂಆರ್​ಸಿಎಲ್ ಅಧಿಕೃತ ಪ್ರಕಟಣೆ ತಿಳಿಸಿದೆ. ಹಳದಿ ಮಾರ್ಗದ ನಿಲ್ದಾಣಗಳ ನಿರ್ಮಾಣ ಹಾಗೂ ನಾಮಕರಣ ಸಂಬಂಧ ಮಾಡಿಕೊಂಡ ಮೂರನೇ ಒಪ್ಪಂದ ಇದಾಗಿದೆ.

ಇನ್ಫೋಸಿಸ್, ಬಯೋಕಾನ್​ನಿಂದಲೂ ಒಪ್ಪಂದ

ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣ ನಾಮಕರಣದ ಹಕ್ಕಿಗೆ ಇನ್ಫೋಸಿಸ್ ಫೌಂಡೇಶನ್ ಸಹಿ ಹಾಕಿದ್ದರೆ, ಹೆಬ್ಬಗೋಡಿ ನಿಲ್ದಾಣಕ್ಕೆ ಬಿಎಂಆರ್​​ಸಿಎಲ್ ಜತೆ ಬಯೋಕಾನ್ ಫೌಂಡೇಶನ್ ಒಪ್ಪಂದ ಮಾಡಿಕೊಂಡಿದೆ.

ಬಿಎಂಆರ್​ಸಿಎಲ್ ಹೇಳಿದ್ದೇನು?

ಇನೋವೇಟಿವ್ ಫೈನಾನ್ಸಿಂಗ್ ಮೆಕ್ಯಾನಿಸಂ ಯೋಜನೆಯಡಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದಕ್ಕೆ ರಾಜ್ಯ ಸರ್ಕಾರದ ಅನುಮೋದನೆ ಪಡೆಯಲಾಗುವುದು ಎಂದು ಬಿಎಂಆರ್​​ಸಿಎಲ್ ಪ್ರಕಟಣೆ ತಿಳಿಸಿದೆ.

10 ಕೋಟಿ ರೂ. ಮೊತ್ತವನ್ನು ಈ ಹಿಂದೆಯೇ ಪಾವತಿಸಲಾಗಿದ್ದು, ಉಳಿದ ಮೊತ್ತ 55 ಕೋಟಿ ರೂ.ವನ್ನು ಈಗ ಪಾವತಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸುಸ್ಥಿರ ನಗರಾಭಿವೃದ್ಧಿ ಮತ್ತು ನಗರ ಸಾರಿಗೆಗೆ ಬೆಂಬಲ ನೀಡಲು ಮುಂದೆ ಬಂದಿರುವುದು ನಮಗೆ ಸಂತಸ ಉಂಟುಮಾಡಿದ ಎಂದು ಬಿಎಂಆರ್​ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ ಮಹೇಶ್ವರ್ ರಾವ್ ತಿಳಿಸಿದ್ದಾರೆ.​​

ಹೊಸೂರು ರಸ್ತೆಯಲ್ಲಿ ಬೊಮ್ಮಸಂದ್ರ ಮೆಟ್ರೋ ನಿಲ್ದಾಣದ ನಿರ್ಮಾಣಕ್ಕಾಗಿ ನಾವು ಬಿಎಂಆರ್​ಸಿಎಲ್​​ನೊಂದಿಗೆ ಪಾಲುದಾರಿಕೆ ಹೊಂದಲು ಸಂತಸವಾಗುತ್ತಿದೆ. ಈ ಯೋಜನೆಯು ಸಾರ್ವಜನಿಕ ಸಾರಿಗೆಯ ಹೆಚ್ಚಿನ ಬಳಕೆಯನ್ನು ಸಕ್ರಿಯಗೊಳಿಸುವ ಮೂಲಕ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷ ಬೆಂಜಮಿನ್ ಲಿನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ನಿರಂಜನ್ ನಾಯಕ್ ಹೇಳಿದ್ದಾರೆ.

Comments


Top Stories

bottom of page