top of page

ಪಾಕಿಸ್ತಾನಕ್ಕೆ ನೀರು ಹೋಗುತ್ತಿಲ್ಲ ಎಂದು ಯಾವುದೋ ಕೆರೆ ತೋರಿಸುತ್ತಿದ್ದಾರೆ: ಸಂತೋಷ್ ಲಾಡ್ ವ್ಯಂಗ್ಯ

  • Writer: Ananthamurthy m Hegde
    Ananthamurthy m Hegde
  • Apr 29
  • 1 min read

ಬೆಂಗಳೂರು: ಪಹಲ್ಗಾಮ್‌ ದಾಳಿಯ ಬಳಿಕ ಕಾಶ್ಮೀರದಲ್ಲಿ ಉಗ್ರರ ಮನೆಗಳನ್ನು ಧ್ವಂಸ ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಹಾಗಿದ್ದರೆ, ಉಗ್ರರ ಮನೆ ಅಲ್ಲಿ ಇದ್ದದ್ದು ಗೊತ್ತಿರಲಿಲ್ಲವೇ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ಪ್ರಶ್ನಿಸಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರು ನಿಲ್ಲಿಸಲು ಸಾಧ್ಯ ಇದ್ಯಾ? ಇದರ ಬಗ್ಗೆ ಪರಾಮರ್ಶೆ ಆಗಿದ್ಯಾ? ಸರ್ಕಾರ ನಿರ್ಣಯ ತೆಗೆದುಕೊಳ್ಳುವ ಮೊದಲು ಮಾಧ್ಯಮಕ್ಕೆ ಸುದ್ದಿ ಬಿಡುತ್ತಾರೆ. ವಾಸ್ತವ ವಿಷಯವನ್ನು ದಾರಿ ತಪ್ಪಿಸಲು ಇಂತಹ ವಿಚಾರ ಚರ್ಚೆಗೆ ಬರುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಯುದ್ಧ ಆರಂಭವಾಗಲಿದೆ. ಫೈಟರ್ ಜೆಟ್ ಸಿದ್ಧವಾಗಿದೆ ಎಂದೂ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಪಾಕಿಸ್ತಾನಕ್ಕೆ ನೀರು ಹೋಗುತ್ತಿಲ್ಲ ಎಂದು ಯಾವುದೊ ಕೆರೆ ನೀರು ತೋರಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಆ ತಂತ್ರಜ್ಞಾನ, ಈ ತಂತ್ರಜ್ಞಾನ, ಎಐ ತಂತ್ರಜ್ಞಾನ ಎಂದು ಮೋದಿ ಹೇಳುತ್ತಾರೆ. ಆದರೆ, ಕಾಶ್ಮೀರದಲ್ಲಿ ಒಂದು ಡ್ರೋನ್‌ ಕೂಡ ಇಲ್ಲ ಎಂದರು. ಪುಲ್ವಾಮಾ ದಾಳಿ ಬಗ್ಗೆ ಬಿಜೆಪಿಯವರು ಯಾರೂ ಈಗ ಮಾತನಾಡುತ್ತಿಲ್ಲ. ಪಹಲ್ಗಾಮ್‌ ದಾಳಿ ಮುಂದಿಟ್ಟು ಮುಂಬರುವ ಬಿಹಾರ ಚುನಾವಣೆ ಎದುರಿಸಲು ಬಿಜೆಪಿಯವರು ಹೊರಟಿದ್ದಾರೆ ಎಂದೂ ಆರೋಪಿಸಿದರು.

Yorumlar


Top Stories

bottom of page