ಪಾಕಿಸ್ತಾನದಲ್ಲಿ ಕ್ರಿಕೆಟ್ ಮೈದಾನದ ಅದ್ವಾನ : ಚಾಂಪಿಯನ್ಸ್ ಟ್ರೋಫಿ ಯುಎಇಗೆ ಶಿಫ್ಟ್ ?
- Ananthamurthy m Hegde
- Jan 11
- 1 min read
ನವದೆಹಲಿ: ಐಸಿಸಿ ICC ಚಾಂಪಿಯನ್ಸ್ ಟ್ರೋಫಿ 2025ರ ವಿಚಾರವಾಗಿ ಭಾರತದ ವಿರುದ್ಧ ತೊಡೆ ತಟ್ಟಿದ್ದ ಪಾಕಿಸ್ತಾನ ಇದೀಗ ಭಾರತದ ಪಂದ್ಯಗಳು ಮಾತ್ರವಲ್ಲ ಇಡೀ ಟೂರ್ನಿ ಆಯೋಜನೆ ಅವಕಾಶವನ್ನೇ ಕಳೆದುಕೊಳ್ಳುವ ಅಪಾಯದಲ್ಲಿದೆ.

ಅಚ್ಚರಿಯಾದರೂ ಇದು ಸತ್ಯ.. ಈ ಹಿಂದೆ ಭಾರತದ ಪಂದ್ಯಗಳನ್ನೂ ಪಾಕಿಸ್ತಾನದಲ್ಲೇ ಆಯೋಜಿಸಬೇಕು ಎಂದು ಪಟ್ಟು ಹಿಡಿದಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇದೀಗ ಇಡೀ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಸರಣಿ ಆಯೋಜನೆಯನ್ನೇ ಕಳೆದುಕೊಳ್ಳುವ ಭೀತಿಯಲ್ಲಿದೆ.
ಕಾರಣ ಈ ಹಿಂದಿನ ವೇಳಾಪಟ್ಟಿಯಂತೆ ಪಾಕಿಸ್ತಾನದ ಕರಾಚಿಯಲ್ಲಿ ಫೆಬ್ರವರಿ 19 ರಂದು ಪ್ರಾರಂಭವಾಗಬೇಕು. ಅಂದರೆ ಸುಮಾರು 40 ದಿನಗಳಲ್ಲಿ ಮಹತ್ವ ಕ್ರಿಕೆಟ್ ಟೂರ್ನಿ ಆರಂಭವಾಗಬೇಕಿದೆ. ಈ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಡಲಾಗುತ್ತಿದ್ದು, ಭಾರತವು ತನ್ನ ಎಲ್ಲಾ ಪಂದ್ಯಗಳನ್ನು (ಅರ್ಹತೆ ಪಡೆದರೆ ನಾಕೌಟ್ ಸುತ್ತುಗಳನ್ನು ಒಳಗೊಂಡಿರುತ್ತದೆ) ದುಬೈನಲ್ಲಿ ಆಡುತ್ತದೆ.
ಆದಾಗ್ಯೂ, ಬಾಕಿ ಪಂದ್ಯಗಳು ಪಾಕಿಸ್ತಾನದ ಮೂರು ಕ್ರೀಡಾಂಗಣಗಳಾದ ಲಾಹೋರ್, ಕರಾಚಿ ಮತ್ತು ರಾವಲ್ಪಿಂಡಿ ಮೈದಾನದಲ್ಲಿ ನಡೆಯಲಿದೆ. ಆದರೆ ಪಂದ್ಯಾವಳಿ ಆರಂಭಕ್ಕೆ ಕ್ಷಣಗನೆ ಆರಂಭವಾಗಿದ್ದರೂ ಪಾಕಿಸ್ತಾನ ಕ್ರಿಕೆಟ್ ಮೈದಾನಗಳ ಸ್ಥಿತಿ ಮಾತ್ರ ಅದ್ವಾನವಾಗಿದೆ. ಮೈದಾನಗಳಲ್ಲಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.
ಇನ್ನೂ ಕಾಂಕ್ರೀಟ್ ಕಾಮಗಾರಿಗಳೇ ನಡೆಯುತ್ತಿದ್ದು, ಇನ್ನು ಬಾಕಿ ಉಳಿದಿರುವ ಸಮಯದಲ್ಲಿ ಮೈದಾನದ ಎಲ್ಲ ಇತರೆ ಸಿದ್ಧತೆಗಳು ಪೂರ್ಣಗೊಳ್ಳುತ್ತವೆಯೇ ಎಂಬುದು ಇದೀಗ ಪ್ರಶ್ನೆಯಾಗಿದೆ. ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳಾದರೂ ವೇಗವಾಗಿ ನಡೆಯುತ್ತಿವೆಯೇ ಎಂದು ನೋಡಿದರೆ ಅದೂ ಇಲ್ಲ. ಹೀಗಾಗಿ ಇದೀಗ ಇಡೀ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯೇ ಯುಎಇಗೆ ಶಿಫ್ಟ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಖಾಸಗಿ ಸುದ್ದಿವಾಹಿನಿ ವರದಿ ಮಾಡಿದ್ದು, ಪಾಕಿಸ್ತಾನದಲ್ಲಿ ನಡೆಯುತ್ತಿರುವ ಕ್ರೀಡಾಂಗಣಗಳ ನವೀಕರಣ ಕಾರ್ಯ ಅತ್ಯಂತ ನಿರಾಶಾದಾಯಕವಾಗಿದೆ. ಎಲ್ಲಾ ಮೂರು ಕ್ರೀಡಾಂಗಣಗಳು ಟೂರ್ನಿಗೆ ಸಿದ್ಧವಾಗಿಲ್ಲ ಮತ್ತು ಇದು ನವೀಕರಣದ ವಿಚಾರ ಮಾತ್ರವಲ್ಲ, ಆದರೆ ಕನಿಷ್ಟ ಪ್ರಮಾಣದ ನಿರ್ಮಾಣ ಕಾರ್ಯಗಳೂ ಕೂಡ ಪೂರ್ಣಗೊಂಡಿಲ್ಲ. ಆಸನಗಳು, ಫ್ಲಡ್‌ಲೈಟ್‌ಗಳು, ಇತರೆ ಸೌಲಭ್ಯಗಳು ಮತ್ತು ಔಟ್‌ಫೀಲ್ಡ್, ಪಿಚ್ ಗಳು ಮತ್ತು ಆಟದ ಮೇಲ್ಮೈ ಸೇರಿದಂತೆ ತುಂಬಾ ಕೆಲಸ ಬಾಕಿ ಉಳಿದಿದೆ ಎಂದು ಹೇಳಿದೆ.
Yorumlar